ವಾಷಿಂಗ್ಟನ್: ಕಾರು ಚಾಲಕನ ಎಡವಟ್ಟಿನಿಂದಾಗಿ ಪೆಟ್ರೋಲ್ ಬಂಕ್ ಹೊತ್ತಿ ಉರಿದ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿದೆ.
ಕಾರು ಚಾಲಕ ಬಂಕ್ ಗೆ ಬಂದು ಪೆಟ್ರೋಲ್ ತುಂಬಿಸಿದ್ದಾನೆ. ತುಂಬಿಸಿದ ಬಳಿಕ ಟ್ಯಾಂಕ್ನಿಂದ ಪೈಪ್ ತೆಗೆಯಲಾಗಿದೆ ಎಂದು ಭಾವಿಸಿ ಕಾರನ್ನು ಓಡಿಸಿದ್ದಾನೆ. ಆದರೆ ಪೈಪ್ ಟ್ಯಾಂಕ್ನಲ್ಲೇ ಇದ್ದ ಕಾರಣ ಕಾರು ಚಲಿಸಿದ ರಭಸಕ್ಕೆ ಪಂಪ್ ಕುಸಿದು ಬಿದ್ದಿದೆ. ಕುಸಿದು ಬಿದ್ದ ರಭಸಕ್ಕೆ ಕೂಡಲೇ ಬೆಂಕಿ ಹೊತ್ತಿಕೊಂಡಿದೆ.
Advertisement
ಕೂಡಲೇ ಅಲ್ಲಿಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಹ್ಯಾಕ್ಸಾಕ್ ಅಗ್ನಿಶಾಮಕ ಸಿಬ್ಬಂದಿ ಫೇಸ್ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
Advertisement