ವಾಷಿಂಗ್ಟನ್: ಸಿರಿಯಾ ದೇಶದ ಮೇಲೆ ಅಮೆರಿಕ ದಾಳಿ ಮಾಡಿದ್ದು, ಪ್ರಮುಖ ವಾಯುನೆಲೆಯೊಂದನ್ನು ಧ್ವಂಸಗೊಳಿಸಿದೆ. ಕ್ಷಿಪಣಿ ದಾಳಿ ಬಳಿಕ ಇದೀಗ ಸಿರಿಯಾ ವಾಯುನೆಲೆ ಹೇಗಿದೆ ಎಂಬುವುದನ್ನು ವೀಡಿಯೋಲ್ಲಿ ಕಾಣಬಹುದು.
Advertisement
ಒಂದು ನಿಮಿಷದ ವೀಡಿಯೋದಲ್ಲಿ ದಾಳಿಯಿಂದ ಶಯ್ರಾತ್ ವಾಯುನೆಯಲ್ಲಿದ್ದ 6 MiG-23 ಯುದ್ಧವಿಮಾನಗಳು, ಶಸ್ತ್ರಾಸ್ತ್ರ ತಯಾರಿಕೆ ವ್ಯವಸ್ಥೆ, ತರಬೇತಿ ವ್ಯವಸ್ಥೆ, ಕ್ಯಾಂಟೀನ್ ಇವುಗಳೆಲ್ಲವೂ ನಾಶವಾಗಿರೋದನ್ನ ಗಮನಿಸಬಹುದು.
Advertisement
Advertisement
ದಾಳಿಗೆ ಕಾರಣವೇನು?: ಸಿರಿಯಾದ ಇದಲಿಬ್ ಪ್ರಾಂತ್ಯದಲ್ಲಿ ನಾಗರಿಕರ ಮೇಲೆ ರಾಸಾಯನಿಕ ಅನಿಲ ದಾಳಿ ನಡೆಸಿರುವುದಕ್ಕೆ ಅಮೆರಿಕಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸಿರಿಯಾ ಸರ್ಕಾರದ ಅಧೀನದಲ್ಲಿರುವ ವಾಯುನೆಲೆಗಳ ಮೇಲೆ ಕ್ರೂಸ್ ಕ್ಷಿಪಣಿಗಳಿಂದ ಗುರುವಾರ ರಾತ್ರಿ ದಾಳಿ ನಡೆಸಿದೆ.
Advertisement
ಸಿರಿಯಾದಲ್ಲಿ ನಾಗರಿಕರ ಮೇಲೆ ನಡೆದಿರುವ ದಾಳಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳು ಮರುಕಳಿಸಬಾರದು ಮತ್ತು ಅಮೆರಿಕ ಅದಕ್ಕೆ ಅವಕಾಶ ನೀಡುವುದಿಲ್ಲ. ಸಿರಿಯಾದಲ್ಲಿ ಶಾಂತಿ ನೆಲೆಸುವವರೆಗೂ ಮತ್ತು ಅಮಾಯಕರ ಸಾವಿಗೆ ನ್ಯಾಯ ಸಿಗುವವರೆಗೂ ಅಮೆರಿಕ ತನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಟ್ರಂಪ್ ಹೇಳಿದರು.
ಶಾಯ್ರತ್ ವಾಯುನೆಲೆಯ ಮೇಲೆ ದಾಳಿ ನಡೆಸುವ ಮುನ್ನ ರಷ್ಯಾದ ಮಿಲಿಟರಿಗೆ ಅಮೆರಿಕ ಮುನ್ಸೂಚನೆ ನೀಡಿತ್ತು. ಆದರೆ, ರಷ್ಯಾದ ಒಪ್ಪಿಗೆಗೆ ಕಾಯದೆಯೇ ಅಮೆರಿಕ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸಿರಿಯಾದ ವಾಯುನೆಲೆಯನ್ನು ಧ್ವಂಸಗೊಳಿಸಿದೆ.