ನವದೆಹಲಿ: ಪೊಲೀಸ್ ಪೇದೆಯೊಬ್ಬರು ಪರಾರಿಯಾಗುತ್ತಿದ್ದ ಸರಗಳ್ಳನನ್ನು ಹಿಡಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಘಟನೆಯ ವೀಡಿಯೋವನ್ನು ದೆಹಲಿ (Delhi) ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಪ್ರಾಣವನ್ನು ಲೆಕ್ಕಿಸದೇ, ಶಹಬಾದ್ ಡೈರಿ ಪೊಲೀಸ್ ಠಾಣೆಯ (Shahabad Dairy police station) ಕಾನ್‍ಸ್ಟೆಬಲ್ ಸತ್ಯೇಂದ್ರ ಕಳ್ಳನನ್ನು ಹಿಡಿದು ಬಂಧಿಸಿದ್ದಾರೆ. ಈ ಕಳ್ಳನ ಬಂಧನದೊಂದಿಗೆ 11 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಈ ಸಂಬಂಧ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 300ಕ್ಕೂ ಹೆಚ್ಚು ಬಸ್‌ಗಳು ತಾತ್ಕಾಲಿಕ ಸ್ಥಗಿತ
Advertisement
अपनी जान की परवाह किए बगैर शाहबाद डेरी थाने के कांस्टेबल सत्येंद्र ने एक स्नैचर को गिरफ्तार किया।
इस स्नैचर की गिरफ्तारी से 11 मामले सुलझाए गए।
विधिक कार्यवाही जारी है।@dcp_outernorth#HeroesOfDelhiPolice pic.twitter.com/PceBbYpdYQ
— Delhi Police (@DelhiPolice) November 24, 2022
Advertisement
ಕಾನ್‍ಸ್ಟೆಬಲ್‍ನ ಕೆಚ್ಚೆದೆಯ ಕಾರ್ಯದಿಂದ ಕಳ್ಳತನವಾಗುತ್ತಿದ್ದ ಮಹಿಳೆಯ ನೆಕ್ಲೇಸ್ ಉಳಿದಿದೆ. ಈ ಹಿಂದೆ ಶಹಾಬಾದ್ ಡೈರಿ ಪೊಲೀಸ್ ಠಾಣೆಯವರು ಸರಗಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಕಳ್ಳನನ್ನು ಪತ್ತೆ ಹಚ್ಚಲು ಕಾನ್‍ಸ್ಟೆಬಲ್ ಸತ್ಯೇಂದ್ರ ತೆರಳಿದ್ದರು. ಇದನ್ನೂ ಓದಿ: ಕೊಡಗಿನಲ್ಲೂ ಉಗ್ರ ಚಟುವಟಿಕೆಗಳಿಲ್ಲ ಎಂದು ಹೇಳುವಂತಿಲ್ಲ ಈ ಬಗ್ಗೆ ಮಾಹಿತಿ ಇದೆ: ಕೆ.ಜಿ ಬೋಪಯ್ಯ ಸ್ಫೋಟಕ ಹೇಳಿಕೆ
Advertisement
Advertisement
ವೀಡಿಯೋದಲ್ಲಿ ಕ್ರಿಮಿನಲ್ ಒಂದು ಕಡೆಯಿಂದ ಬರುತ್ತಿದ್ದಂತೆಯೇ ಕಾನ್‍ಸ್ಟೆಬಲ್ ತನ್ನ ಬೈಕನ್ನು ನಿಧಾನಗೊಳಿಸುತ್ತಾರೆ. ಪೊಲೀಸ್ ಅನ್ನು ಕಂಡ ಆರೋಪಿ ಗಾಬರಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸುತ್ತಾನೆ. ಆದರೆ ತಕ್ಷಣವೇ ಸತ್ಯೇಂದ್ರ ಅವರು ಆತನನ್ನು ಬಿಗಿಯಾಗಿ ಹಿಡಿದು, ತಪ್ಪಿಸಿಕೊಳ್ಳದಂತೆ ತಡೆಯುವುದನ್ನು ಕಾಣಬಹುದಾಗಿದೆ. ಇನ್ನೂ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅದ್ಭುತ, ಸೂಪರ್ ಎಂದು ಕಾನ್‍ಸ್ಟೆಬಲ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.