ನವದೆಹಲಿ: ಬೈಕರ್ ಗುಂಪಿನೊಂದಿಗೆ ತೀವ್ರ ಮಾತಿನ ಚಕಮಕಿ ನಡೆದ ಹಿನ್ನೆಲೆ ಉದ್ದೇಶಪೂರ್ವಕವಾಗಿಯೇ ಸ್ಕಾರ್ಪಿಯೋ ಡ್ರೈವರ್, ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ದೆಹಲಿಯ ಅರ್ಜನ್ ಗಢ್ ಮೆಟ್ರೋ ನಿಲ್ದಾಣದ ಬಳಿ ಬೈಕ್ ರೈಡ್ ಮಾಡುತ್ತಿದ್ದ ಗುಂಪಿನೊಂದಿಗೆ ಸ್ಕಾರ್ಪಿಯೋ ಡ್ರೈವರ್ ಮಾತಿಗೆ ಮಾತು ಬೆಳೆಸಿ ಜಗಳವಾಡಲು ಮುಂದಾಗಿದ್ದಾನೆ. ಇದು ಅತಿರೇಕಕ್ಕೆ ಹೋಗಿದ್ದು, ಆಕ್ರೋಶಗೊಂಡ ಡ್ರೈವರ್ ಬೇಕೆಂದು ಬೈಕ್‍ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ಸಂಪೂರ್ಣ ವೀಡಿಯೋವನ್ನು ಬೈಕ್ ಗುಂಪಿನ ಸವಾರರೊಬ್ಬರು ಫೋನ್‍ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ: ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು ಮಹಿಳೆಯರು
Advertisement
@PMOIndia @ArvindKejriwal @DCPNewDelhi
Please help us , the Scorpio Car driver almost killed a few of our riders and threatened to kill us by crushing us under the car.
This is not what we vote for or pay taxes for
no one was severely injured
Gears respect riders pic.twitter.com/rcZIZvP7q4
— ANURAG R IYER (@anuragiyer) June 5, 2022
Advertisement
ಬೈಕರ್ ಅನುರಾಗ್ ಐ ಅಯ್ಯರ್ ಟ್ವೀಟ್‍ನಲ್ಲಿ, ಸ್ಕಾರ್ಪಿಯೋ ಕಾರ್ ಡ್ರೈವರ್ ನಮ್ಮ ಕೆಲವು ಸವಾರರನ್ನು ಕೊಲ್ಲುವುದಾಗಿ ಬೆಂದರಿಕೆ ಹಾಕಿದ್ದಾನೆ. ಅಲ್ಲದೇ ನಮ್ಮ ಸ್ನೇಹಿತನಿಗೆ ಬೇಕೆಂದು ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಿಂದ ಯಾರಿಗೂ ತೀವ್ರವಾಗಿ ಗಾಯವಾಗಿಲ್ಲ ಎಂದು ಬರೆದು ವೀಡಿಯೋ ಟ್ವೀಟ್ ಮಾಡಿದ್ದಾರೆ.
Advertisement
Advertisement
ಅನುರಾಗ್ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಿಎಂ ನರೇಂದ್ರ ಮೋದಿ ಮತ್ತು ದೆಹಲಿಯ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಅವರಿಗೆ ವೀಡಿಯೋ ಟ್ಯಾಗ್ ಮಾಡಿದ್ದು, ಇದಕ್ಕಾಗಿ ನಾವು ಮತ ಹಾಕುವುದಿಲ್ಲ ಮತ್ತು ತೆರಿಗೆ ಪಾವತಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ನಂತರ, ದೆಹಲಿ ಪೊಲೀಸರು ವಿಷಯದ ಬಗ್ಗೆ ಗಮನ ಹರಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅನುಭವ ಮಂಟಪ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ: ಬೊಮ್ಮಾಯಿ
ಗಾಯಗೊಂಡ ಬೈಕ್ ಸವಾರನ ಸ್ನೇಹಿತ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾನು ನನ್ನ 8 ರಿಂದ 10 ಸ್ನೇಹಿತರೊಂದಿಗೆ ಗುರುಗ್ರಾಮ್‍ನಿಂದ ದೆಹಲಿಗೆ ಹಿಂದಿರುಗುತ್ತಿದ್ದೆ. ಕಾರ್ ಡ್ರೈವರ್ ನಮ್ಮ ಬಳಿ ಬಂದು ರಾಶ್ ಡ್ರೈವಿಂಗ್ ಪ್ರಾರಂಭಿಸಿದನು. ಆತ ನನ್ನ ಸ್ನೇಹಿತನಿಗೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಹಿನ್ನೆಲೆ ನನ್ನ ಸ್ನೇಹಿತರು ಸ್ವಲ್ಪ ನಿಧಾನವಾಗಿ ರೈಡ್ ಮಾಡುತ್ತಿದ್ದೆವು. ಅವನೇ ವೇಗವಾಗಿ ಮುಂದೆ ಬಂದು ನನ್ನ ಸ್ನೇಹಿತನಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.