ಚಿಕ್ಕಮಗಳೂರು: ರಾಷ್ಟ್ರಪಕ್ಷಿ ನವಿಲು ತನ್ನ ಗರಿ ಬಿಚ್ಚಿ ನೃತ್ಯ ಮಾಡಿರುವ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ಕಂಡುಬಂದಿದೆ.
ನವಿಲು ಆಗಾಗ ತನ್ನ ಗರಿ ಬಿಚ್ಚಿ ನೃತ್ಯ ಮಾಡಿಕೊಂಡು ಇಡೀ ಗ್ರಾಮವನ್ನೇ ರಂಜಿಸುತ್ತಿದ್ದು ಗ್ರಾಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಳೆದ ಎರಡು ವರ್ಷದ ಹಿಂದೆ ಗ್ರಾಮದ ಸೋಮಶೇಖರ್ ಕಾಡಿನಲ್ಲಿ ಶ್ವಾನಗಳ ಬಾಯಿಗೆ ತುತ್ತಾಗುತ್ತಿದ್ದ ನವಿಲುಗಳ ಮೊಟ್ಟೆಯನ್ನು ತಂದು ತಮ್ಮ ಮನೆಯ ಕೋಳಿಯ ಮೊಟ್ಟೆಯ ಜೊತೆ ನವಿಲಿನ ಮೊಟ್ಟೆ ಇಟ್ಟಿದ್ದರು.
Advertisement
Advertisement
ನಂತರ ಕೋಳಿ ನವಿಲು ಮರಿಗೆ ಜನ್ಮ ನೀಡಿತ್ತು. ನಂತರ ನಾಡಿನ ಜನರೊಂದಿಗೆ ಬೆಳೆದ ನವಿಲು ಗ್ರಾಮದಲ್ಲೇ ತನ್ನ ಜೀವನ ಮುಂದುವರೆಸಿದೆ. ರೆಕ್ಕೆ ಬಿಚ್ಚಿ ನಾಟ್ಯವಾಡುತ್ತ ಇಡೀ ಗ್ರಾಮವನ್ನೇ ರಂಜಿಸುತ್ತಿದ್ದು ಎಲ್ಲರ ಆಕರ್ಷಣೆಯಾಗಿದೆ.
Advertisement
ನವಿಲು ನಾಟ್ಯವಾಡುತ್ತಿದ್ದರೆ ಇಡೀ ಗ್ರಾಮದ ಜನ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಹಲವು ಬಾರಿ ಸೋಮಶೇಖರ್ ನವಿಲನ್ನು ಕಾಡಿಗೆ ಬಿಟ್ಟು ಬಂದರು ಗ್ರಾಮವನ್ನು ತೊರೆಯದ ನವಿಲು ಮತ್ತೆ ವಾಪಾಸ್ ಗ್ರಾಮಕ್ಕೆ ಬರುತ್ತಿರುವುದು ಗ್ರಾಮಸ್ಥರಲ್ಲಿ ಆಶ್ಚರ್ಯ ತಂದಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=HaNd7CEO0aM&feature=youtu.be