ಚೆನ್ನೈ: ಫುಡ್ ಡೆಲಿವರಿ ಬಾಯ್‍ಗೆ ನಡು ರಸ್ತೆಯಲ್ಲಿ ಪೊಲೀಸ್‍ವೊಬ್ಬರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರಿನಲ್ಲಿ ಈ ಘಟನೆ ನಡೆದಿದೆ.
ಫುಡ್ ಡೆಲಿವರಿಬಾಯ್ ವೆಂಕಟೇಶ್‍ಗೆ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಧರ್ಮರಾಜ್ ಅಮಾನುಷವಾಗಿ ಥಳಿಸಿರುವುದರ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಮ್ಮ ಜಿಲ್ಲೆಯನ್ನೇ ಹಾಳ್ ಮಾಡಿಬಿಟ್ಟಿದ್ದಾನೆ – ಮಾಧುಸ್ವಾಮಿ ವಿರುದ್ಧ ಬಸವರಾಜ್, ಬೈರತಿ ಗುಸು ಗುಸು
Advertisement
Advertisement
ವೀಡಿಯೋದಲ್ಲಿ ವೆಂಕಟೇಶ್ ಕಾಲರ್ ಹಿಡಿದು ಧರ್ಮರಾಜ್ ಎಳೆದಾಡುತ್ತಾ ಕ್ರೂರವಾಗಿ ಹೊಡೆಯಲು ಆರಂಭಿಸಿದ್ದಾರೆ. ನಂತರ ವೆಂಕಟೇಶ್ ಚಾಕು ಹೊರತೆಗೆದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ
Advertisement
ವೆಂಕಟೇಶ್ ಮತ್ತು ಪೊಲೀಸ್ ಅಧಿಕಾರಿ ಧರ್ಮರಾಜ್ ನಡುವೆ 600 ರೂಪಾಯಿ ದಂಡದ ವಿಚಾರವಾಗಿ ವಾಗ್ವಾದ ನಡೆದಿದ್ದು, ವೆಂಕಟೇಶ್ ಬಳಿ ವಾಹನದ ದಾಖಲೆಗಳಿಲ್ಲದ ಕಾರಣ ದಂಡ ವಿಧಿಸಲಾಗಿದೆ. ಈ ವೇಳೆ ಹಣ ಕಟ್ಟಲು ನಿರಾಕರಿಸಿದ್ದಕ್ಕೆ ವೆಂಕಟೇಶ್ ಮೇಲೆ ಪೊಲೀಸ್ ಹಲ್ಲೆ ನಡೆಸಿದ್ದಾರೆ. ಘಟನೆ ವೇಳೆ ದಾರಿಹೋಕರು ವೆಂಕಟೇಶ್‍ಗೆ ಹೊಡೆಯುವುದನ್ನು ನಿಲ್ಲಿಸುವಂತೆ ಧರ್ಮರಾಜ್‍ಗೆ ಮನವಿ ಮಾಡಿದರೂ ಅವರು ನಿಲ್ಲಿಸಲಿಲ್ಲ. ಅಂತಿಮವಾಗಿ ಇತರ ಕೆಲವು ಪೊಲೀಸರು ಮಧ್ಯ ಪ್ರವೇಶಿಸಿ ವೆಂಕಟೇಶನನ್ನು ಕರೆದೊಯ್ದಿದ್ದಾರೆ.
Advertisement
ವೆಂಕಟೇಶ್, ಧರ್ಮರಾಜ್ ಅವರಿಗೆ ಚಾಕುವಿನಿಂದ ಬೆದರಿಕೆ ಹಾಕಿರುವುದಾಗಿ ಶ್ರೀವಿಲ್ಲಿಪುತ್ತೂರು ಪೊಲೀಸರು ಸೆಕ್ಷನ್ 294 (ಬಿ), 353, 307, ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಇದೀಗ ಧರ್ಮರಾಜ್ ವೆಂಕಟೇಶ್ ಅವರನ್ನು ಅಮಾನುಷವಾಗಿ ಥಳಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರ ದೌರ್ಜನ್ಯವನ್ನು ಹಲವರು ಖಂಡಿಸಿದ್ದಾರೆ. ಇದನ್ನೂ ಓದಿ: ಸೂರತ್‍ನಲ್ಲಿ ಟ್ಯಾಂಕರ್‌ನಿಂದ ವಿಷಕಾರಿ ಅನಿಲ ಸೋರಿಕೆ – 5 ಮಂದಿ ಸಾವು, 20 ಮಂದಿ ಅಸ್ವಸ್ಥ