ಬೆಂಗಳೂರು: ಸತತ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ನಲುಗಿದೆ. ಇಷ್ಟು ದಿನ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ಜನರು, ಈಗ ಮಳೆ ನೀರಿನ ಸಮಸ್ಯೆ ಎದುರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಪಬ್ಲಿಕ್ ಟಿವಿ ನಡೆಸಿದ ಕ್ಯಾಂಪೇನ್ ಇದೀಗ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದೆ.
ಮಳೆ ನೀರು ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಗಣೇಶನ ವೇಷ ಧರಿಸಿದ್ದ ಪಬ್ಲಿಕ್ ಟಿವಿಯ ರಿಪೋರ್ಟರ್ ಪ್ರಕಾಶ್ ಡಿ.ರಾಂಪೂರ್ ಬೆಂಗಳೂರನ್ನು ರೌಂಡ್ಸ್ ಹಾಕಿ ಜನಾಭಿಪ್ರಾಯವನ್ನು ಆಲಿಸಿದ್ದರು. ಇದೀಗ ಈ ಪಬ್ಲಿಕ್ ಟಿವಿಯ ಗ್ರೌಂಡ್ ರಿಪೋಟಿಂಗ್ ರಾಷ್ಟ್ರವ್ಯಾಪಿ ಸಕತ್ ಸದ್ದು ಮಾಡುತ್ತಿದೆ. ಈ ಬಗ್ಗೆ ಖ್ಯಾತ ಉದ್ಯಮಿ ಮೋಹನ್ ದಾಸ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ, ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Pl see in Bengaluru pic.twitter.com/n9BncJDI0L
— Mohandas Pai (@TVMohandasPai) September 5, 2022
Advertisement
ಟ್ರಾಫಿಕ್‍ಗೆ ಫೇಮಸ್ ಆಗಿದ್ದ ಬೆಂಗಳೂರು, ಈಗ ಮಳೆ ಪ್ರವಾಹಕ್ಕೂ ಫೇಮಸ್ ಆಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ನಗರ ರಸ್ತೆಗಳು, ಲೇಔಟ್‍ಗಳು ಜಲಾವೃತಗೊಂಡಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ
Advertisement
Advertisement
ಗಣೇಶ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಜನತೆ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಅನುಭವಿಸುತ್ತಿರುವ ಸಮಸ್ಯೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಪ್ರತಿನಿಧಿ ಪ್ರಕಾಶ್, ಗಣೇಶನ ವೇಷಧರಿಸಿ ಗ್ರೌಂಡ್ ರಿಪೋರ್ಟಿಂಗ್ ಇಳಿದು ಜನರು ಅನುಭವಿಸುತ್ತಿರುವ ಸಮಸ್ಯೆಯನ್ನ ಅನಾವರಣಗೊಳಿಸಿದ್ದಾರೆ. ಈ ಎಲ್ಲಾ ವರದಿಯು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ಪಡೆಯುತ್ತಿದೆ. ಇದನ್ನೂ ಓದಿ: 255 ಕೋಟಿ ಡೀಲ್ – ಅಮೆರಿಕದ ಕಂಪನಿಯನ್ನು ಖರೀದಿಸಲಿದೆ ರಿಲಯನ್ಸ್