ಬೆಂಗಳೂರು: ಕೆಲ ಪೊಲೀಸರು ವಸೂಲಿ ರಾಜರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷ್ಯ. ಆದ್ರೆ ಕಡ್ಲೆಕಾಯನ್ನೂ ಬಿಡಲ್ಲ ಅಂತಾ ಬಯಲಾಗಿದ್ದು ಇವತ್ತು ಬಯಲಾಗಿದೆ.
ಹೌದು. ನಗರದ ದೊಡ್ಡ ಜಾತ್ರೆ ಬಸವನಗುಡಿಯ ಕಡ್ಲೆಕಾಯಿ ಪರಿಷೆ ನಿನ್ನೆಯಿಂದ ಆರಂಭವಾಗಿದೆ. ಈ ಜಾತ್ರೆಗೆ ನಗರದ ಹಲವೆಡೆಗಳಿಂದ ಜನರು ಹರಿದುಬರುತ್ತಾರೆ. ಹೀಗೆ ತುಂಬಿ ತುಳುಕುತ್ತಿರೋ ಜನರ ಮಧ್ಯೆ ಪೊಲೀಸ್ ಪೇದೆಯೊಬ್ಬರು ಕಡ್ಲೆಕಾಯಿ ಭಿಕ್ಷೆ ಬೇಡುತ್ತಿರುವುದು ಜನಸಾಮಾನ್ಯರ ಗಮನಕ್ಕೆ ಬಂದಿದೆ.
Advertisement
ಕಾನ್ಸ್ ಸ್ಟೇಬಲ್ ಸಣ್ಣದಾದ ಚೀಲವೊಂದನ್ನು ಹಿಡಿದುಕೊಂಡು ಕಡ್ಲೆಕಾಯಿ ಬೇಡುತ್ತಿರುವುದುನ್ನು ನೆರೆದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
Advertisement
ಬೆಂಗಳೂರು ದೊಡ್ಡ ಬಸವಣ್ಣ ದೇವಸ್ಥಾನದ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಮಿಠಾಯಿ, ಫ್ಯಾನ್ಸಿ ವಸ್ತುಗಳು, ಭಾವಚಿತ್ರಗಳು, ಕಸೂತಿ ಮಾಡಿದ ಬುಟ್ಟಿ, ಗೃಹ ಬಳಕೆ ವಸ್ತು, ಅಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ಮಾಲೆಗಳು, ಹೂಗುಚ್ಛ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಅಂಗಡಿಗಳು ಬಸವನಗುಡಿ ದೊಡ್ಡ ಬಸವಣ್ಣ ದೇವಸ್ಥಾನ ಎದುರು, ಅಕ್ಕಪಕ್ಕದ ರಸ್ತೆಗಳಲ್ಲಿ ಬಿಡಾರ ಹೂಡಿರುವುದನ್ನು ಕಾಣಬಹುದು.
Advertisement
ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ಶ್ರೀನಿವಾಸಪುರ, ಮಾಗಡಿ, ಮಂಡ್ಯ, ಮೈಸೂರು, ಚಿಂತಾಮಣಿ, ತುಮಕೂರು, ಕುಣಿಗಲ್ ಸೇರಿದಂತೆ ನೆರೆಯ ಆಂಧ್ರ ಪ್ರದೇಶದಿಂದಲೂ ವರ್ತಕರು ಬಂದು ಕಡ್ಲೆಕಾಯಿ ಮಾರುತ್ತಾರೆ. ಉಳಿದ ವಸ್ತುಗಳ ವ್ಯಾಪಾರಿಗಳು ಬೇರೆ ಬೇರೆ ರಾಜ್ಯದಿಂದಲೂ ಆಗಮಿಸಿದ್ದಾರೆ.
https://www.youtube.com/watch?v=BDrCNJk5Fho