ಮುಂಬೈ: ಮೊಘಲ್ ರಾಜ ಔರಂಗಜೇಬನ ಪೋಸ್ಟರ್‌ಗಳನ್ನು (Aurangzeb poster) ಹಿಡಿದು ನೃತ್ಯ (Dance) ಮಾಡಿದ್ದ 8 ಯುವಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ (Maharashtra) ವಾಶಿಮ್‍ನ ಮಂಗ್ರುಲ್ಪಿರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜ.1ರಂದು ದಾದಾ ಹಯಾತ್ ಖಲಂದರ್‍ನ ಉರುಸ್ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಔರಂಗಜೇಬ್‍ನ ಪೋಸ್ಟರ್‌ಗಳನ್ನು ಹೊತ್ತುಕೊಂಡು ಬಂದಿದ್ದರು. ತದನಂತರ ಆ ಪೋಸ್ಟರ್‌ಗಳನ್ನು ಹಿಡಿದು ನರ್ತಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Advertisement
Maha | Case registered against 8 people in Washim in connection with a viral video of people dancing with Mughal emperor Aurangzeb’s photos
Mangrulpir Insp says, “Some youths carried Aurangzeb’s photos during Dada Hayat Qalandar’s urs on Jan 1 & raised slogans. Case registered.” pic.twitter.com/iGv1DnpcQH
— ANI (@ANI) January 16, 2023
Advertisement
ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆಯನ್ನು ಆರಂಭಿಸಿದ್ದಾರೆ. ಈ ವೇಳೆ ಘಟನೆಗೆ ಸಂಬಂಧಿಸಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಇಲಾಖೆಯ ಟೆಂಡರ್ ಕೊಡಿಸದ್ದಕ್ಕೆ ನನ್ನ ಮೇಲೆ ಭ್ರಷ್ಟಾಚಾರ ಆರೋಪ: ಶಾಸಕ ತಿಪ್ಪಾರೆಡ್ಡಿ
Advertisement
ವೀಡಿಯೋದಲ್ಲಿ ಏನಿದೆ?: ಕೆಲವು ಪುಂಡರು ಔರಂಗಜೇಬ್‍ನ ಪೋಸ್ಟರ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಹಾಡು ಹಾಡುತ್ತಾ ನರ್ತಿಸುತ್ತಿದ್ದಾರೆ. ಜೊತೆಗೆ ಅನೇಕ ಘೋಷಣೆಗಳನ್ನು ಕೂಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
Advertisement
ಹಿಂದೂ ಸಂಘಟನೆಯಿಂದ ಪ್ರತಿಭಟನೆ: ಔರಂಗಜೇಬ್ ಫೋಟೋ ಇಟ್ಟುಕೊಂಡು ನೃತ್ಯ ಮಾಡಿದ ಜನರ ಗುಂಪಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಹಿಂದೂ ಸಂಘಟನೆಯೊಂದು ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದೆ. ಅಲ್ಲದೆ, ಔರಂಗಜೇಬ್ ಪ್ರತಿಕೃತಿಯನ್ನು ಸಹ ಈ ಸಂಘಟನೆ ದಹಿಸಿದೆ. ಇದನ್ನೂ ಓದಿ: 13 ಜನ ಸಚಿವರ ಸಿಡಿಗಳು ಚುನಾವಣೆ ಒಳಗೆ ಬಿಡುಗಡೆಯಾಗಲಿದೆ: ಸಿಎಂ ಇಬ್ರಾಹಿಂ ಹೊಸ ಬಾಂಬ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k