ಮುಂಬೈ: ಬೈಕ್ ಸಾವರನೊಬ್ಬ ಟ್ರಾಫಿಕ್ ಪೊಲೀಸ್‍ಗೆ ನಡುರಸ್ತೆಯಲ್ಲಿ ಕಪಾಳಕ್ಕೆ ಬಾರಿಸಿರುವ ಘಟನೆ ಸೋಮವಾರದಂದು ಮುಂಬೈನಲ್ಲಿ ನಡೆದಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಕಾರಣಕ್ಕೆ ಇಲ್ಲಿನ ವಾಸೈನಲ್ಲಿ ಟ್ರಾಫಿಕ್ ಪೊಲೀಸ್ ಕಾಲು ವಿಠಲ್ ಮುಂಡೆ ಬೈಕ್ ಸವಾರನನ್ನು ತಡೆದಿದ್ದರು. ಈ ವೇಳೆ ಬೈಕ್ ಸವಾರ ತನ್ನ ಹೆಂಡತಿ ಹಾಗೂ ಮಗುವಿನೊಂದಿಗೆ ಹೋಗುತ್ತಿದ್ದರು. ಸವಾರ ವಾಸೈನ ಪಾರ್ವತಿ ಕ್ರಾಸ್ ಏರಿಯ ಬಳಿ ಸಿಗ್ನಲ್ ಜಂಪ್ ಮಾಡಿದ್ದರು ಎನ್ನಲಾಗಿದೆ. ಆದ್ರೆ ನಾನು ಯಾವುದೇ ಸಂಚಾರ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಸವಾರ ವಾದಿಸಿದ್ದಾರೆ. ಆದ್ರೆ ಟ್ರಾಫಿಕ್ ಪೊಲೀಸ್ ಇದಕ್ಕೆ ಕಿವಿಗೊಡದ ಕಾರಣ ಬೈಕ್ ಸವಾರ ನಡುರಸ್ತೆಯಲ್ಲೇ ಎಲ್ಲರೆದುರು ಟ್ರಾಫಿಕ್ ಪೊಲೀಸ್‍ಗೆ ಎರಡು ಬಾರಿ ಕೆನ್ನೆಗೆ ಬಾರಿಸಿದ್ದಾರೆ.
Advertisement
ನಂತರ ಆರೋಪಿ ಬೈಕ್ ಸವಾರನನ್ನ ಮಾಣಿಕ್‍ಪುರ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಾವು ಬೈಕ್ ಸವಾರನ ವಿರುದ್ಧ ಸೆಕ್ಷನ್ 186ರ ಅಡಿ ಪ್ರಕರಣ ದಾಖಲಿಸಿಕೊಂಡು, ಎಚ್ಚರಿಕೆ ನೀಡಿ ಕಳಿಸಿದ್ದೇವೆ ಅಂತ ಮಾಣಿಕ್‍ಪುರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅನಿಲ್ ಪಾಟಿಲ್ ಹೇಳಿದ್ದಾರೆ.
Advertisement
#WATCH: Man in Thane's Vasai slaps traffic policeman after the policeman stopped him for jumping traffic signal #Maharashtra pic.twitter.com/wt1F8fR6cE
— ANI (@ANI) August 11, 2017