ನವದೆಹಲಿ: ದೆಹಲಿ ಪೊಲೀಸ್ ಎಂದು ಬರೆದುಕೊಂಡ ವಾಹನದಲ್ಲಿ ಜೀವದ ಹಂಗು ತೊರೆದು ವ್ಯಕ್ತಿಯೋರ್ವ ಸ್ಟಂಟ್ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೆಹಲಿ ಪೊಲೀಸ್ ಎಂದು ಬರೆದಿದ್ದ ವಾಹನದ ಮೇಲೆ ಯುವಕ ಸ್ಟಂಟ್ ಮಾಡಿದ್ದಾನೆ. ವಾಹನ ಚಲಿಸುತ್ತಿರುವಾಗಲೇ ಡ್ರೈವರ್ ಸೀಟ್‍ನಿಂದಲೇ ಕಾರ್‍ನ ಮೇಲೆ ಹತ್ತಿ ಡಿಪ್ಸ್ ಹೊಡೆಯುವುದು ಸೇರಿದಂತೆ ವಿವಿಧ ರೀತಿಯ ಸ್ಟಂಟ್ ಮಾಡುತ್ತಿದ್ದಾನೆ. ಕಾರ್‍ನ ಮೇಲೆ ಬೀಕಾನ್ ಲೈಟ್ ಕೂಡ ಇದೆ.
Advertisement
Thanks, This complaint has already been forwarded to senior officers for taking necessary action in this regard.
— Delhi Traffic Police (@dtptraffic) June 26, 2019
Advertisement
ಈ ಕುರಿತು ಮಾಹಿತಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿರುವುದರ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ಈ ವಾಹನವು ಜೆ.ಪಿ.ಶರ್ಮಾ ಎಂಬುವರ ಹೆಸರಿನಲ್ಲಿ ನೊಂದಣಿಯಾಗಿದ್ದು, ಟಿಕ್ ಟಾಕ್‍ನಲ್ಲಿ ಅಪ್‍ಲೋಡ್ ಮಾಡಿರುವವರ ಪ್ರೊಫೈಲ್‍ನ ಆಧಾರದ ಮೇಲೆ ಸಹ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
Advertisement
Advertisement
ವಾಹನದ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಸ್ಟಂಟ್ ಮಾಡಿದ ವ್ಯಕ್ತಿಯನ್ನೂ ಸಹ ಪತ್ತೆ ಹಚ್ಚಲಾಗುತ್ತಿದೆ. ಈ ಕುರಿತು ಕಠಿಣ ಕ್ರಮ ಜರುಗಿಸಲಾಗುವುದು ಎಂದು ದೆಹಲಿ ಡಿಸಿಪಿ ಮಧುರ್ ವರ್ಮಾ ತಿಳಿಸಿದ್ದಾರೆ.