ನವದೆಹಲಿ: ನಾವು ಒಂದು ಬೈಕ್‍ನಲ್ಲಿ ಇಬ್ಬರು ಅಥವಾ ಮೂವರು ಕುಳಿತುಕೊಳ್ಳವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪೂರ್ತಿ ಅವನ ಕುಟುಂಬವನ್ನು ಲಗೇಜ್ ಸಮೇತ ಒಂದೇ ಬೈಕ್‍ನಲ್ಲಿ ಸಾಗಿಸಿದ್ದಾನೆ.
ಒಂದು ಬೈಕ್‍ನಲ್ಲಿ ತನ್ನ ಐದು ಜನ ಮಕ್ಕಳು ಮತ್ತು ಹೆಂಡತಿ ಹಾಗೂ ಎರಡು ನಾಯಿ ಮರಿಯ ಜೊತೆಗೆ ತನ್ನ ಮನೆಯ ಎಲ್ಲ ಲಗೇಜ್‍ನ್ನು ಕಟ್ಟಿಕೊಂಡು ಒಬ್ಬ ವ್ಯಕ್ತಿ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Only in India! pic.twitter.com/1ZvKLVvaZp
— Rishad Cooper (@rishadcooper) August 29, 2019
ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ರಿಷಾದ್ ಕೂಪರ್ ಎಂಬವರು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬೈಕಿನ ಹಿಂಬದಿಯಲ್ಲಿ ಮೂರು ಮಕ್ಕಳು ಕುಳಿತಿದ್ದಾರೆ. ನಂತರ ಆತನ ಮಡದಿ ಕುಳಿತಿದ್ದಾಳೆ. ಆತ ಬೈಕ್ ಓಡಿಸುತ್ತಿದ್ದು, ಮುಂಭಾಗದಲ್ಲಿ ಇಬ್ಬರು ಮಕ್ಕಳು ಕುಳಿತಿರುತ್ತಾರೆ. ಬೈಕಿನ ಸುತ್ತಾ ಲಗೇಜ್‍ನ್ನು ಕಟ್ಟಿದ್ದು, ಬೈಕ್ ಬಲಭಾಗದಲ್ಲಿರುವ ಲಗೇಜ್ ಮೇಲೆ ಒಂದು ನಾಯಿ ಆರಾಮವಾಗಿ ಕುಳಿತಿದೆ. ಇನ್ನೊಂದು ನಾಯಿಯನ್ನು ಮುಂದೆ ಕುಳಿತಿರುವ ಹುಡುಗ ಹಿಡಿದುಕೊಂಡಿರುವುದನ್ನು ಕಾಣಬಹುದು.
ಒಟ್ಟು ಈ ವಿಡಿಯೋದಲ್ಲಿ ನಾಯಿಗಳನ್ನು ಸೇರಿಸಿದರೆ ಒಟ್ಟು 9 ಜನ ಕುಳಿತಿದ್ದಾರೆ. ಈ ವಿಡಿಯೋ ಆಪ್ಲೋಡ್ ಮಾಡಿರುವ ಕೂಪರ್ ಇದಕ್ಕೆ ಭಾರತದಲ್ಲಿ ಮಾತ್ರ ಎಂದು ಶೀರ್ಷಿಕೆ ಕೊಟ್ಟಿದ್ದು, ವಿಡಿಯೋ ನೋಡಿದ ಜನರು ಅಶ್ಚರ್ಯದ ಜೊತೆಗೆ ಅತಂಕವನ್ನು ವ್ಯಕ್ತಪಡಿಸಿದ್ದಾರೆ.
Im jealous of that dog sitting in the side
— Jishnu Vediyoor (@thisconfusedguy) August 30, 2019