ಮಂಗಳೂರು: ಪರ ಸ್ತ್ರೀ ಜೊತೆ ತಂದೆಯ ದೈಹಿಕ ಸಂಪರ್ಕದ (Physical Relation) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆದ ಹಿನ್ನೆಲೆ ಮನನೊಂದು ಪುತ್ರ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡಬಿದ್ರೆ (Moodbidri) ತಾಲೂಕಿನಲ್ಲಿ ನಡೆದಿದೆ.
ಸುಮಂತ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ತನ್ನ ತಂದೆ ಪರ ಸ್ತ್ರೀ ಜೊತೆ ದೈಹಿಕ ಸಂಪರ್ಕ ಮಾಡುವಾಗ ಸಿಕ್ಕಿಬಿದ್ದಿದ್ದರು. ಸ್ಥಳೀಯ ಯುವಕನೊಬ್ಬ ಇವರಿಬ್ಬರ ದೈಹಿಕ ಸಂಪರ್ಕದ ವಿಡಿಯೋ ರೆಕಾರ್ಡ್ ಮಾಡಿದ್ದು, ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ಇಳಿ ವಯಸ್ಸಿನ ಮಹಿಳೆ ಮತ್ತು ಯುವಕನ ತಂದೆ ಮುಜುಗರಕ್ಕೆ ಒಳಗಾಗಿದ್ದರು. ಇದನ್ನೂ ಓದಿ: ತಂದೆಯ ಲೈಂಗಿಕ ಕಿರುಕುಳದಿಂದ ರಕ್ಷಿಸುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಗ್ಯಾಂಗ್‌ರೇಪ್
ಆ ಬಳಿಕ ಸುಮಂತ್ ತಂದೆಯ ಜೊತೆ ಜಗಳ ಮಾಡಿದ್ದು, ತಂದೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆ ತೀವ್ರ ಮುಜುಗರ ಅನುಭವಿಸಿದ್ದ. ಇದರಿಂದ ತೀವ್ರ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ವಿಡಿಯೋ ವೈರಲ್ ಮಾಡಿದ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜಯಕುಮಾರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕಾಲೇಜು ಹಾಸ್ಟೆಲ್‌ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]