ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ ಮೇಲೆ ವಿದ್ಯಾರ್ಥಿನಿಯರು ರ‍್ಯಾಗಿಂಗ್ ನಡೆಸುತ್ತಿರುವ ವಿಡಿಯೋ ಈಗ ಬಿಡುಗಡೆಯಾಗಿದೆ.
ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದಸಾಗರ ಕಾಲೇಜಿನ 2ನೇ ಸೆಮಿಸ್ಟರ್ ಸಿವಿಲ್ ವಿದ್ಯಾರ್ಥಿನಿ ಮೇಘನಾ ಬುಧವಾರ ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಈ ವೇಳೆ ಪೋಷಕರು ರ‍್ಯಾಗಿಂಗ್ ನಡೆದ ಹಿನ್ನೆಲೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಪೂರಕ ಎಂಬಂತೆ ಎರಡು ವಿಡಿಯೋಗಳು ಈಗ ಲಭ್ಯವಾಗಿದೆ.
Advertisement
Advertisement
ಈ ದೃಶ್ಯಗಳಲ್ಲಿ ಇತರೇ ವಿದ್ಯಾರ್ಥಿಗಳು ಮೇಘನಾ ಮೇಲೆ ರ‍್ಯಾಗಿಂಗ್ ಮಾಡುತ್ತಿರುವುದು ಸ್ಪಷ್ಟವಾಗಿದೆ. ದೃಶ್ಯಗಳಲ್ಲಿ ಕೆಲ ವಿದ್ಯಾರ್ಥಿಗಳು ಮೇಘನಾಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಸಹಪಾಠಿ ಮೇಘನಾ ಮೇಲೆ ಹಲ್ಲೆ ಮಾಡಲು ಸಹ ಮುಂದಾಗಿದ್ದ ದೃಶ್ಯವು ಸೆರೆಯಾಗಿದೆ.
Advertisement
ಕಳೆದ ಕೆಲ ದಿನಗಳ ಹಿಂದೆ ಕಾಲೇಜಿನಲ್ಲಿ ನಡೆದ ಎಲೆಕ್ಷನ್ ವಿಚಾರವಾಗಿ ತರಗತಿಯ ಇತರೇ ವಿದ್ಯಾರ್ಥಿಗಳು ಮೇಘನಾ ಮೇಲೆ ರ‍್ಯಾಗಿಂಗ್ ಮಾಡುತ್ತಿದ್ದರು. ಈ ಕುರಿತು ಕಾಲೇಜಿನ ಎಚ್‍ಒಡಿ ಗೆ ದೂರು ನೀಡಲಾಗಿತ್ತು. ಆದರೆ ಮೇಘನಾ ಸಿಇಟಿ ಮೂಲಕ ಪ್ರವೇಶ ಪಡೆದ ಕಾರಣ ಆಕೆಯ ದೂರನ್ನು ಪರಿಗಣಿಸಲಿಲ್ಲ ಎನ್ನುವ ಮಾತು ಈಗ ಕೇಳಿ ಬಂದಿದೆ. ಇದನ್ನೂ ಓದಿ : ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮೇಘನಾ ಪೋಷಕರು
Advertisement
ಪ್ರಸ್ತುತ ವಿಡಿಯೋ ಲಭ್ಯವಾಗಿರುವುದರಿಂದ ಮೇಘನಾ ಸಾವಿಗೆ ಪ್ರೇರಣೆ ನೀಡುವ ಕುರಿತು ಪೊಲೀಸರು ತನಿಖೆ ನಡೆಸುವ ಸಾಧ್ಯತೆಗಳಿದೆ.
https://www.youtube.com/watch?v=_98DaNwldQU