Districts
ಮರದಿಂದ ಹಲಸಿನ ಕಾಯಿ ಕಿತ್ತುಕೊಳ್ಳೋ ಆನೆಯ ವಿಡಿಯೋ ವೈರಲ್

ಮಡಿಕೇರಿ: ಹಲಸಿನ ಹಣ್ಣಿನ ಸ್ವಾದಕ್ಕೆ ಮರಳಾಗದವರು ಯಾರೂ ಇಲ್ಲ. ಮನುಷ್ಯರಾದ್ರೆ ಮರ ಏರಿ ಹಲಸಿನ ಹಣ್ಣು ಅಥವಾ ಕಾಯಿಯನ್ನ ಕಿತ್ತು ಕೆಳಗಿಳಿಸಿ ಕುಯ್ದು ತಿನ್ನುತ್ತಾರೆ. ಆದ್ರೆ ಕಾಡಾನೆಯೊಂದು ತನ್ನ ಸೊಂಡಿಲಿನಿಂದ ಮರದಲ್ಲಿದ್ದ ಹಲಸಿನ ಕಾಯಿಯನ್ನ ಕೀಳುವ ವಿಡಿಯೋ ಮೊಬೈಲ್‍ನಲ್ಲಿ ಸೆರೆಸಿಕ್ಕಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಈ ಆನೆ ಪ್ರತ್ಯಕ್ಷವಾಗಿದ್ದು, ಹಲಸಿನ ಕಾಯಿ ಕೀಳುವ ದೃಶ್ಯ ಇದೀಗ ವೈರಲ್ ಅಗಿದೆ.
ಸುಮಾರು ಒಂದೂವರೆ ನಿಮಿಷದ ವಿಡಿಯೋದಲ್ಲಿ ಆನೆ ತನ್ನ ಕಾಲುಗಳನ್ನ ಮರದ ಮೇಲಿರಿಸಿ, ಸೊಂಡಿಲಿನಿಂದ ಹಲಸಿನ ಕಾಯಿ ಕಿತ್ತುಕೊಳ್ಳುವ ಸಂಪೂರ್ಣ ದೃಶ್ಯವಿದೆ. ಕಳೆದ 29 ರಂದು ಕಾಫಿ ತೋಟದ ಮನೆಯೊಂದರ ಬಳಿ ಬಂದ ಆನೆಯ ದೃಶ್ಯವನ್ನು ಕಾರ್ಮಿಕರು ಸೆರೆಹಿಡಿದಿದ್ದಾರೆ.
https://www.youtube.com/watch?v=j7yHLhLTwek&feature=youtu.be
