ಆಸ್ಟ್ರೇಲಿಯಾಗೆ ಬಂದಿಳಿದ ಚಾಂಪಿಯನ್ ಪ್ಯಾಟ್ ಕಮ್ಮಿನ್ಸ್- ಸ್ವಾಗತಿಸಲು ಜನವೇ ಇಲ್ಲ

Public TV
2 Min Read
PAT CUMMINS

ಸಿಡ್ನಿ: ವಿಶ್ವಕಪ್ 2023 (World Cup 2023) ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿತ್ತು. ಇದೀಗ ತಂಡದ ಕೆಲವರು ಅವರವರ ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ. ಅಂತೆಯೇ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಕೂಡ ಸಿಡ್ನಿ ಏರ್‌ಪೋರ್ಟ್‌ ಗೆ (Sidney Airport) ಬಂದಿಳಿದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಹೌದು. ಇಂದು ಬೆಳಗ್ಗೆ ಕಮ್ಮಿನ್ಸ್ (Pat Cummins) ಅವರು ಸಿಡ್ನಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇದನ್ನು Andrew McGlashan of ESPNcricinfo ಅವರು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ “ಪ್ಯಾಟ್ ಕಮ್ಮಿನ್ಸ್ ವಿಶ್ವಕಪ್ ವಿಜೇತ ನಾಯಕನಾಗಿ ತವರಿಗೆ ಮರಳಿದ್ದಾರೆ” ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

ವಿಡಿಯೋದಲ್ಲೇನಿದೆ..?: ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಸೀಸ್ ತಂಡದ ನಾಯಕ ಕಮ್ಮಿನ್ಸ್ ಅವರು ತಮ್ಮ ಲಗ್ಗೇಜ್‍ಗಳನ್ನು ಸ್ವತಃ ತಾವೇ ವ್ಹೀಲಿಂಗ್ ಮಾಡಿಕೊಂಡು ಹೋಗುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೆ ಹೀಗೆ ಹೋಗುತ್ತಿದ್ದ ಸಂದರ್ಭದಲ್ಲಿ ಒಬ್ಬರು ಬಂದು ಶೇಕ್‍ಹ್ಯಾಂಡ್ ಮಾಡಿದ್ದಾರೆ. ಈ ವೇಳೆ ಅಲ್ಲಿ ಕ್ಯಾಮೆರಾದವರು ಬಿಟ್ಟರೆ ಬೇರೆ ಯಾರೂ ಇಲ್ಲ. ಹೀಗಾಗಿ ಟ್ರೋಫಿ ಗೆದ್ದು ಬಂದ ನಾಯಕನನ್ನು ಸ್ವಾಗತಿಸಲು ಯಾರೂ ಬರಲಿಲ್ಲ ಎಂದು ಜನ ಬೇಸರಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಣ್ಣೀರಿಟ್ಟ ಕೊಹ್ಲಿಯನ್ನು ಅಪ್ಪಿ ಸಂತೈಸಿದ ಮ್ಯಾಕ್ಸ್‌ವೆಲ್‌

ವೀಡಿಯೋ ಶೇರ್ ಮಾಡಿದ ಒಬ್ಬರು, ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕೆಲವೇ ಕೆಲವು ಕ್ರೀಡಾ ಪತ್ರಕರ್ತರು ಫೋಟೋಗಳನ್ನು ಕ್ಲಿಕ್ ಮಾಡುತ್ತಾರೆ. ಇನ್ನೂ ಉಳಿದ ಪ್ರಯಾಣಿಕರು ತಮ್ಮ ಪಾಡಿಗೆ ಹೋಗುತ್ತಿದ್ದಾರೆ. ಇದಕ್ಕಿಂತ ಒಂದು ಜೆಸಿಬಿ ಒತ್ತುವರಿ ಮಾಡೋದನ್ನು ನೋಡಲು ಜನ ಬರುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಲ್ಲಿನ ಜನರಿಗೆ ಉತ್ಸಾಹವೇ ಇಲ್ಲ. ಕಮಿನ್ಸ್ ಅವರು ವಿಶ್ವಕಪ್ ಗೆದ್ದ ಬಳಿಕ ಮನೆಗೆ ಹಿಂದಿರುಗುತ್ತಿದ್ದಾರೆ. ಆದರೆ ವಿಶ್ವ ಚಾಂಪಿಯನ್ ಅವರನ್ನು ಸ್ವೀಕರಿಸಲು ಜನರೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ಹೀಗೆ ಹಲವಾರು ಮಂದಿ ವೀಡಿಯೋ ಶೇರ್ ಮಾಡಿಕೊಂಡು ಬರೆದುಕೊಳ್ಳುವ ಮೂಲಕ ಅಲ್ಲಿನ ಜನ ಕೊಡುವ ಗೌರವದ ಬಗ್ಗೆ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಆಸ್ಟ್ರೇಲಿಯಾ ತಂಡದ ಕೆಲವು ಸದಸ್ಯರು ಸ್ವದೇಶಕ್ಕೆ ಮರಳಿದ್ದರೆ, ಇನ್ನೂ ಕೆಲವರು ನವೆಂಬರ್ 23 ರಿಂದ ಪ್ರಾರಂಭವಾಗುವ 5 ಪಂದ್ಯಗಳ ಟಿ20ಐ ಸರಣಿಗಾಗಿ ಭಾರತದಲ್ಲಿ ಉಳಿದುಕೊಂಡಿದ್ದಾರೆ.

Share This Article