LatestNational

ಪತ್ನಿಯೊಂದಿಗೆ ಕೊನೆಯದಾಗಿ ಮಾತನಾಡಿದ ನವಾಜ್ ಶರೀಫ್- ಭಾವನಾತ್ಮಕ ವಿಡಿಯೋ ವೈರಲ್

ಲಾಹೋರ್: “ಕಣ್ಣು ತೆರೆದು ನೋಡಿ ಕುಲ್ಸೂಮ್” ಅಂತಾ ಪದೇ ಪದೇ ಭಾವನಾತ್ಮಕವಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್, ಪತ್ನಿ ಬೇಗಂ ಕುಲ್ಸೂಮ್ ಅವರಿಗೆ ಮನವಿ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಪತ್ನಿ ಬೇಗಂ ಕುಲ್ಸೂಮ್ (68) ಲಂಡನ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧರಾಗಿದ್ದಾರೆ. ಕುಲ್ಸೂಮ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ದೀರ್ಘ ಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜೈಲು ಶಿಕ್ಷೆಗೆ ಗುರಿಯಾಗಿದ್ದ ನವಾಜ್ ಶರೀಫ್ ಅವರು, 2018ರ ಜುಲೈ 12ರಂದು ಪಾಕಿಸ್ತಾನಕ್ಕೆ ತೆರಳುವಾಗ ಪತ್ನಿಯ ಮುಖ ನೋಡಿ, ಮಾತನಾಡಿದ್ದರು. ಅದೇ ಕೊನೆ ಮತ್ತೆ ಬೇಗಂ ಅವರನ್ನು ನವಾಜ್ ಅವರು ನೋಡಲಿಲ್ಲ, ಮಾತನಾಡಿಸಲು ಆಗಿರಲಿಲ್ಲ.

ನವಾಜ್ ಕೇಳಿದ್ದು ಏನು?
ಕಣ್ಣು ತೆರೆದು ನೋಡಿ ಕುಲ್ಸೂಮ್, ಕಣ್ಣು ತೆರೆಯಿರಿ, ಬಾವೂಜಿ… ಬಾವೂಜಿ… ಎಂದು ನವಾಜ್ ಕೇಳಿಕೊಂಡರೂ ಕುಲ್ಸೂಮ್ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಮತ್ತೆ ಮುಂದುವರಿದು ನವಾಜ್ ಶರೀಫ್ ಅವರು, ಅಲ್ಲಾ ನಿಮಗೆ ಆರೋಗ್ಯ ನೀಡಲಿ, ಅಲ್ಲಾ ನಿಮಗೆ ಸಾಮರ್ಥ್ಯ ನೀಡಲಿ ಎಂದು ಹೇಳಿದ ದೃಶ್ಯವನ್ನು ಲಂಡನ್‍ನ ಹಾರ್ಲಿ ಸ್ಟ್ರೀಟ್ ಕ್ಲಿನಿಕ್‍ನಲ್ಲಿ ಚಿತ್ರಿಕರಿಸಲಾಗಿತ್ತು.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕುಲ್ಸೂಮ್ ಅವರಿಗೆ ಪತಿಯ ಮನವಿ ಮುಟ್ಟಿತ್ತು ಅನಿಸುತ್ತದೆ. ಕೆಲವು ಸೆಕೆಂಡ್ ಮಾತ್ರ ಕಣ್ಣು ತೆರೆದು ಕುಲ್ಸೂಮ್ ಅವರು ನೋಡಿದ್ದರಂತೆ. ಆಗ ಎಲ್ಲವನ್ನು ಅಲ್ಲಾನ ಮೇಲೆ ಭಾರವನ್ನು ಹಾಕಿ ನವಾಜ್ ಪಾಕಿಸ್ತಾನಕ್ಕೆ ತೆರಳಿದ್ದರು ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published.

Back to top button