ಮಳೆಯೇ ಇಲ್ಲದ ನಾಡಿನಲ್ಲಿ ಜಲದೇವಿಯ ನೃತ್ಯ: ವಿಡಿಯೋ

Public TV
1 Min Read
Ctd musicial fountain collage copy

ಚಿತ್ರದುರ್ಗ: ಮಳೆಯೇ ಇಲ್ಲದ ನಾಡಿನಲ್ಲಿ ಮುರುಘಾಮಠದಲ್ಲಿ ಜಲದೇವಿ ನೃತ್ಯ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಮುರುಘಾಮಠ ಕೋಟೆನಾಡು ಚಿತ್ರದುರ್ಗದ ಹೊರವಲಯದಲ್ಲಿದ್ದು, ಈ ಮುರುಘಾಮಠದ ಆವರಣದಲ್ಲಿನ ಮುರುಘಾವನ ಈಗಾಗಲೇ ನಾಡಿನಾದ್ಯಂತ ಚಿರಪರಿಚಿತವಾಗಿದೆ.

ಆದಿ ಮಾನವನಿಂದ ಹಿಡಿದು ಇಂದಿನ ಆಧುನಿಕ ಮಾನವನ ಸ್ಥಿತಿಗತಿಗಳ ಚಿತ್ರಣಗಳು ಇಲ್ಲಿ ಅನಾವರಣಗೊಂಡಿದೆ. ಇತ್ತೀಚೆಗೆ ಮುರುಘಾವನದಲ್ಲಿ ಸಂಗೀತ ಕಾರಂಜಿ ಹಾಗು ಬೋಟ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ವೀಕೆಂಡ್ ಕಳೆಯಲು ವಿವಿಧೆಡೆ ಪ್ರವಾಸ ಹೋಗುತ್ತಿದ್ದ ಜನರು ಈಗ ಸುಮಧುರ ಹಾಡುಗಳ ಜೊತೆಗೆ ನರ್ತಿಸುವ ನೀರಿನ ಆಕರ್ಷಣೀಯ ನೃತ್ಯ ನೋಡುತ್ತಾ ಮೈ ಮರೆಯುತಿದ್ದು, ಅಪರೂಪದ ಸಂಗೀತ ಕಾರಂಜಿಯ ಝಲಕ್ ಎಲ್ಲರ ಕಣ್ಮನ ಸೆಳೆಯುತ್ತಿದೆ.

ctd musicial fountain collage 2 copy

ಸಂಗೀತ ಕಾರಂಜಿ ಈಗ ಮುರುಘಾವನದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು, ನಿತ್ಯ ಸಾವಿರಾರು ಜನ ಸಂಗೀತ ಕಾರಂಜಿ ವೀಕ್ಷಿಸಲು ಆಗಮಿಸುತ್ತಿದ್ದಾರೆ. ಸಂಜೆ 7 ಗಂಟೆಯಿಂದ ರಂಗು ರಂಗಿನ ಸಂಗೀತ ಕಾರಂಜಿ ಆರಂಭವಾಗುತ್ತದೆ. ಹೀಗಾಗಿ ಈ ಸುಂದರ ಸೊಬಗಿನ ಕಣ್ಮನ ತುಂಬಿಸಿಕೊಳ್ಳಲು ಜನ ಕಾತುರರಾಗಿ ಕಾಯುತ್ತಾರೆ. ಅಲ್ಲದೇ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಒಂದೆಡೆ ಸಿಗುವ ಇತಿಹಾಸ ಮಾಹಿತಿ, ಸಂಗೀತ ಮನರಂಜನೆ ಹಾಗೂ ಬೋಟಿಂಗ್ ರೋಮಾಂಚನದಲ್ಲಿ ಸಮಯದ ಅರಿವಿಲ್ಲದಂತೆ ಎಂಜಾಯ್ ಮಾಡುವ ಸ್ಪಾಟ್ ಈ ಮುರುಘಾ ಮಠವೆನಿಸಿದೆ. ಒಟ್ಟಾರೆಯಾಗಿ ಕೋಟೆನಾಡಿನ ಮುರುಘಾಮಠದಲ್ಲೀಗ ಸಂಗೀತ ಕಾರಂಜಿ ಜನರ ಮನ ತಣಿಸುತ್ತಿದೆ. ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಹೀಗಾಗಿ ನಿತ್ಯ ಜನಸಾಗರವೇ ಮುರುಘಾವನದ ಸಂಗೀತ ಕಾರಂಜಿಯತ್ತ ಹೆಜ್ಜೆ ಹಾಕುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *