ಆಕಾಶದಲ್ಲೇ ತುಂಡಾದ ಹೆಲಿಕಾಪ್ಟರ್‌ನ ಫ್ಯಾನ್‌ – ಐವರು ದುರ್ಮರಣ

Public TV
2 Min Read
America Helicopter Crash

ನ್ಯೂಯಾರ್ಕ್: ಹೆಲಿಕಾಪ್ಟರ್ ಪತನಗೊಂಡು‌ (Helicopter Crash) ನದಿಗೆ ಬಿದ್ದ ಪರಿಣಾಮ ಪೈಲಟ್‌ ಸೇರಿದಂತೆ ಐವರು ಸಾವಿಗೀಡಾದ ಘಟನೆ ನ್ಯೂಯಾರ್ಕ್‌ನಲ್ಲಿ (New York) ನಡೆದಿದೆ.

ಮೃತರಲ್ಲಿ ನಾಲ್ವರು ಸ್ಪ್ಯಾನಿಷ್ ಮೂಲದ ಒಂದೇ ಕುಟುಂಬದವರಾಗಿದ್ದು, ಪ್ರವಾಸಕ್ಕಾಗಿ ನ್ಯೂಯಾರ್ಕ್‌ಗೆ ಬಂದಿದ್ದರು. ಮೃತಪಟ್ಟವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

&

nbsp;

ಹೆಲಿಕಾಪ್ಟರ್‌ ಪತನದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಬೆಲ್ 206 ಹೆಲಿಕಾಪ್ಟರ್‌ನ ಪತನಗೊಂಡ ಭಾಗಗಳು ಹಡ್ಸನ್ ನದಿಗೆ ಬೀಳುವುದನ್ನು ನೋಡಬಹುದಾಗಿದೆ. ಅಲ್ಲದೇ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್ ತುಂಡಾಗಿ ನದಿಗೆ ಮೊದಲು ಬಿದ್ದಿದೆ. ಬಳಿಕ ಪಕ್ಕದಲ್ಲಿ ಹೆಲಿಕಾಪ್ಟರ್‌ ನದಿಗೆ ಅಪ್ಪಳಿಸಿದೆ.

ಹೆಲಿಕಾಪ್ಟರ್ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಕೈಪೋರ್ಟ್‌ನಿಂದ ಹೊರಟು, ಹಾರಿ ಮ್ಯಾನ್‌ಹ್ಯಾಟನ್ ತೀರದ ಜಾರ್ಜ್ ವಾಷಿಂಗ್ಟನ್ ಸೇತುವೆ ಬಳಿ ಬಂದು ತಲುಪಿತ್ತು. ನಂತರ ಅದು ಡೌನ್‌ಟೌನ್ ಮ್ಯಾನ್‌ಹ್ಯಾಟನ್ ಹೆಲಿಪೋರ್ಟ್ ಕಡೆಗೆ ಹಿಂತಿರುಗುವಾಗ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ನ ಮುಖ್ಯ ರೋಟರ್‌ಗಳು ಬಾಲ ಬೂಮ್‌ಗೆ ಬಡಿದು ತುಂಡಾಗಿರುವ ಸಾಧ್ಯತೆ ಇದೆ. ಇನ್ನೂ ಯಾಂತ್ರಿಕ ವೈಫಲ್ಯದಿಂದ ಅಪಘಾತ ಸಂಭವಿಸಿದ್ದು, ಪೈಲಟ್‌ಗೆ ವಿಮಾನವನ್ನು ಉಳಿಸಲು ಯಾವುದೇ ಅವಕಾಶವಿರಲಿಲ್ಲ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಹೆಲಿಕಾಪ್ಟರ್‌ ದುರಂತದ ದೃಶ್ಯಗಳು ಭಯಾನಕವಾಗಿದೆ. ದುರಂತದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Share This Article