ಊಟಿ: ಅರಣ್ಯ ಸಿಬ್ಬಂದಿ ಕೆಸರಿನಲ್ಲಿ ಬಿದ್ದ ಆನೆಮರಿಯನ್ನು ರಕ್ಷಿಸಿ ನಂತರ ಹೆಗಲ ಮೇಲೆ ಹೊತ್ತುಕೊಂಡು ತಾಯಿಯ ಬಳಿ ಸೇರಿಸಿರುವ ಘಟನೆ ಊಟಿಯ ಮೆಟ್ಟುಪಾಳ್ಯಂನ ನೆಲ್ಲಿಮಲದಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರು ಟ್ರಾಕ್ಟರ್ ನಲ್ಲಿ ಮೆಟ್ಟುಪಾಳ್ಯಂನಲ್ಲಿರುವ ವಾನಬದ್ರ ಕಾಳಿಯಮ್ಮ ದೇವಸ್ಥಾನದಿಂದ ತೆಕ್ಕಮ್ಮಪಟ್ಟಿಗೆ ಹೋಗುವಾಗ ಕಾಡೆನೆಯ ಗುಂಪು ರಸ್ತೆಯನ್ನು ತಡೆದಿತ್ತು. ಎಷ್ಟೇ ಹಾರ್ನ್ ಮಾಡಿದರೂ ಆನೆಗಳು ಅಲ್ಲಿಂದ ಕದಲಲಿಲ್ಲ. ಬದಲಿಗೆ ವ್ಯಕ್ತಿಯ ಮೇಲೆ ದಾಳಿಗೆ ಮುಂದಾಗಿದ್ದವು. ಹೀಗಾಗಿ ತಕ್ಷಣ ಅವರು ಅರಣ್ಯ ಅಧಿಕಾರಿಗಳನ್ನ ಸಂರ್ಪಕಿಸಿದರು. ನಂತರ ಪಟಾಕಿ ಹೊಡೆಯುವ ಮೂಲಕ ಆನೆಗಳನ್ನು ಕಾಡಿಗೆ ಕಳುಹಿಸಿದ್ದರು. ಆಗ ಆನೆಮರಿಯೊಂದು ಕೂಗಿಕೊಳ್ಳುತ್ತಿದ್ದುದು ಕೇಳಿಸಿತ್ತು. ಹತ್ತಿರದಲ್ಲಿದ್ದ ಕಾಲುವೆಯಲ್ಲಿ ಆನೆಮರಿ ಕೆಸರಿನಲ್ಲಿ ಸಿಲುಕಿಕೊಂಡು ತಾಯಿಯಿಂದ ಬೇರ್ಪಟ್ಟಿತ್ತು.
Advertisement
Advertisement
ಆನೆಮರಿಯ ತಾಯಿ ರಸ್ತೆಯ ಇನ್ನೊಂದು ಬದಿಯಲ್ಲಿ ತನ್ನ ಮರಿಗಾಗಿ ಕಾಯುತ್ತಿದೆ ಎಂಬ ವಿಷಯ ತಿಳಿದ ತಕ್ಷಣ ಅರಣ್ಯ ಸಿಬ್ಬಂದಿ ಆನೆಮರಿಯನ್ನು ರಕ್ಷಣೆ ಮಾಡಿದ್ದರು. ನಂತರ ಆನೆಮರಿ ನಡೆಯಲಾಗದನ್ನು ಗಮನಿಸಿದ ಅಧಿಕಾರಿಯೊಬ್ಬರು ತನ್ನ ಹೆಗಲ ಮೇಲೆ ಹೊತ್ತುಕೊಂಡು ತಾಯಿಯ ಬಳಿ ಸೇರಿಸಿದ್ದಾರೆ.
Advertisement
ಆದ್ರೆ ಆನೆಮರಿಗೆ ತನ್ನನ್ನು ಹೊತ್ತುಕೊಂಡು ಬಂದ ಸಿಬ್ಬಂದಿಯ ಮೇಲೆ ಪ್ರೀತಿಯಾಗಿ ಅವರ ಬಳಿಯೇ ಹಿಂದಿರುಗಿ ಬರುತ್ತಿತ್ತು. ಇದು ಎರಡೂ ದಿನಗಳ ಕಾಲ ನಡೆದಿದ್ದು, ಸಿಬ್ಬಂದಿ ಆನೆಮರಿಗೆ ಲ್ಯಾಕ್ಟೊಜೆನ್ ಗ್ಲೂಕೊಸ್ ಹಾಗೂ ಎಳನೀರು ನೀಡುತ್ತಿದ್ದರು. ನಂತರ ಗುರುವಾರ ಸಂಜೆ ತಾಯಿ ಆನೆ ಬಂದಿದ್ದು, ಮರಿಯನ್ನು ತಾಯಿಯ ಬಳಿ ಸೇರಿಸಿದ್ದಾರೆ. ತಾಯಿ ಹಾಗೂ ಮರಿಯಾನೆಯ ಪುರ್ನ ಮಿಲನದಿಂದ ಅರಣ್ಯ ಸಿಬ್ಬಂದಿ ಸಂತೋಷಪಟ್ಟಿದ್ದಾರೆ.