ಬೀಜಿಂಗ್: ಸಾಮಾನ್ಯವಾಗಿ ವಸ್ತುಗಳನ್ನು ಖರೀದಿಸುವಾಗ ಅದನ್ನು ಪರಿಶೀಲಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಐಫೋನ್ ಗೆ ಹೊಸ ಬ್ಯಾಟರಿ ಖರೀದಿಸುವಾಗ ಅದನ್ನು ಪರಿಶೀಲಿಸಲು ಬ್ಯಾಟರಿಯನ್ನು ಕಚ್ಚಿದ್ದಾನೆ. ಬಾಯಿಂದ ಬ್ಯಾಟರಿ ತೆಗೆಯುತ್ತಿದ್ದಂತೆ ಅದು ಸ್ಪೋಟಗೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ತನ್ನ ಐಫೋನ್‍ಗೆ ಹೊಸ ಬ್ಯಾಟರಿ ಖರೀದಿಸಲು ಹೋಗಿದ್ದಾನೆ. ನಂತರ ಬ್ಯಾಟರಿ ಚೆನ್ನಾಗಿದ್ದೀಯಾ ಎಂದು ಪರಿಶೀಲಿಸಲೆಂದು ಅದನ್ನು ಕಚ್ಚಿದ್ದಾನೆ. ಬ್ಯಾಟರಿಯನ್ನು ಕಚ್ಚಿ ಬಾಯಿಂದ ತೆಗೆದ ತಕ್ಷಣ ಅದು ಸ್ಫೋಟಗೊಂಡಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement
ಬ್ಯಾಟರಿ ಸ್ಫೋಟಗೊಳ್ಳುವಾಗ ಗ್ರಾಹಕನ ಮುಖದಿಂದ ಕೊಂಚ ದೂರವಿದ್ದು, ಯಾವುದೇ ಗಾಯವಾಗಿಲ್ಲ. ಅಷ್ಟೇ ಅಲ್ಲದೇ ಅಂಗಡಿಯಲ್ಲಿ ತುಂಬಾ ಜನರಿದ್ದು, ಅವರಿಗೂ ಯಾವುದೇ ಗಾಯವಾಗಿಲ್ಲ ಎಂದು ವರದಿಯಾಗಿದೆ.
Advertisement
ಈ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಮಯೋಪಾಯೈ ಜನವರಿ 20ರಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ. ವರದಿಯ ಪ್ರಕಾರ ಈ ವಿಡಿಯೋ 45ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ.