ಆಕಾಶದಿಂದ ಮದುವೆ ಮನೆಗೆ ಎಂಟ್ರಿ ಕೊಟ್ಟ ವರ-ವಧು: ವಿಡಿಯೋ ವೈರಲ್

Public TV
1 Min Read
special marriage

ನವದೆಹಲಿ: ವಧು- ವರ ತಮ್ಮ ಮದುವೆಯಲ್ಲಿ ಹದ್ದಿನ ಪಂಜರ(ಈಗಲ್ ಕೇಜ್) ನಲ್ಲಿ ಆಕಾಶದಿಂದ ಎಂಟ್ರಿ ಕೊಟ್ಟ ಅಪರೂಪದ ಘಟನೆಯೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ವರ ಕುದುರೆ ಸವಾರಿ ಮಾಡುವ ಮೂಲಕ ಮದುವೆ ಮನೆಗೆ ಎಂಟ್ರಿ ಕೊಡುತ್ತಾನೆ. ಆದರೆ ಈ ನವದಂಪತಿ ಆಕಾಶದಿಂದ ಹದ್ದಿನ ಪಂಜರಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಈ ಜೋಡಿ ಎಂಟ್ರಿ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮ್ಮ ಮದುವೆಯಲ್ಲಿ ವಿಶಿಷ್ಟ ಎಂಟ್ರಿ ಇರಲಿ ಎಂದು ಈ ಜೋಡಿ ಹದ್ದಿನ ಪಂಜರದಲ್ಲಿ ಮೇಲಿಂದ ಕೆಳಗೆ ಬರುತ್ತಿರುವಾಗ ಖ್ಯಾತ ಗಾಯಕ ಮೊಹಮದ್ ರಫಿ ಅವರ ‘ಬಾಹಾರೋ ಪೂಲ್ ಬರಸಾವೋ’ ಹಾಡನ್ನು ಬ್ಯಾಕ್‍ಗ್ರೌಂಡ್ ಹಾಡಾಗಿ ನೀಡಿದ್ದರು. ನವಜೋಡಿ ಮದುವೆ ಮನೆ ತಲುಪುತ್ತಿದ್ದಂತೆ ಪಂಜರಕ್ಕೆ ಹಾಕಿದ ಪಟಾಕಿಗಳು ಸಿಡಿಯಲು ಆರಂಭಿಸಿತ್ತು.

ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಟ್ವಿಟ್ಟರಿನಲ್ಲಿ ಶೇರ್ ಮಾಡಿ “ಇದು ಪಕ್ಷಿ, ಇದು ವಿಮಾನ, ಇದು ವಧು-ವರ. ಭಾರತೀಯ ಮದುವೆ ಹದ್ದು ಮೀರುತ್ತಿದೆ” ಎಂದು ಕ್ಯಾಪ್ಷನ್ ನೀಡಿ ಟ್ವೀಟ್ ಮಾಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *