– ಪಾಕ್ ಮಿಸೈಲ್‌ಗಳು ಇದೇ ರೀತಿ ಅಪ್ಪಳಿಸಿದ್ದು ಅಂತ ಲೇವಡಿ
– AK47 ಸಂಭ್ರಮ ಸಮರ್ಥಿಸಿಕೊಂಡ ಫರ್ಹಾನ್
ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್-4 ನಲ್ಲಿ ಟೀಂ ಇಂಡಿಯಾ (Team India) ವಿರುದ್ಧ ಸೋತ ಪಾಕಿಸ್ತಾನ ಮೈದಾನದಲ್ಲಿ ಮತ್ತೆ ಮಾನ ಕಳೆದುಕೊಂಡಿದೆ. ಮೊದಲ ಆಫ್‌ನಲ್ಲಿ ಜಿಗಿದಾಡಿ, ಸೆಕೆಂಡ್ ಆಫ್‌ನಲ್ಲಿ ಗೋಳಾಡಿದೆ. ಈ ಸಂದರ್ಭದಲ್ಲಿ ಪಾಕ್ (Pakistan) ಆಟಗಾರರ ದುರ್ವರ್ತನೆ ತೀವ್ರ ಟೀಕೆಗೆ ಗುರಿಯಾಗಿದೆ.
 
View this post on Instagram 
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕ್ ಆಟಗಾರರ ಮನಸ್ಥಿತಿ ಬಯಲಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಫರ್ಹಾನ್ ಹಾಫ್ ಸೆಂಚುರಿ ಬಾರಿಸಿದ ಬಳಿಕ ಬ್ಯಾಟ್ ಅನ್ನು ರೈಫಲ್‌ನಂತೆ ಪ್ರದರ್ಶಿಸಿ ಸಂಭ್ರಮಿಸಿದ್ದು, ಭಾರತೀಯರನ್ನು ಕೆರಳಿಸಿದೆ. ಫರ್ಹಾನ್ ತಮ್ಮ ಬ್ಯಾಟನ್ನು ರೈಫಲ್ ಮಾದರಿಯಲ್ಲಿ ಹಿಡಿದು, ಅದರಿಂದ ಫೈಯರ್ ಮಾಡುತ್ತಿರುವ ಹಾಗೆ ಸಂಭ್ರಮಿಸಿದ್ದರು. ಮೂರು ಸುತ್ತು ಹುಂಡು ಹಾರಿಸುವ ರೀತಿ ಸನ್ನೆ ಮಾಡಿ, ಕ್ರಿಕೆಟ್ ಮೈದಾನದಲ್ಲೂ ಯುದ್ಧದ ಮನಸ್ಥಿತಿಯನ್ನು ತೋರಿದ್ದರು. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ಫಿಫ್ಟಿ ಬಾರಿಸಿ ಫರ್ಹಾನ್ ಗನ್ ಸೆಲೆಬ್ರೇಷನ್ – ಪೆಹಲ್ಗಾಮ್ ದಾಳಿಯ ಉಗ್ರರಿಗೆ ಹೋಲಿಸಿದ ನೆಟ್ಟಿಗರು

ಈ ವೇಳೆ ಮತ್ತೊಬ್ಬ ಆಟಗಾರ ಹ್ಯಾರಿಸ್ ರೌಫ್ (Haris Rauf), ʻಕೊಹ್ಲಿ, ಕೊಹ್ಲಿʼ ಎಂದು ಕೂಗುತ್ತಿದ್ದ ಅಭಿಮಾನಿಗಳ ಕಡೆಗೆ ತಿರುಗಿ ಮೈದಾನದಲ್ಲಿ ವಿಮಾನ ಪತನವಾಗುವಂತೆ ಕೈಸನ್ನೆ ಮಾಡಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ 6 ರಫೇಲ್ ಯುದ್ಧ ವಿಮಾನಗಳನ್ನ ಹೊಡೆದುರುಳಿಸಿದ್ದಾಗಿ ಹಸಿ ಹಸಿ ಸುಳ್ಳು ಬಿತ್ತರಿಸಿತ್ತು. ಈಗ ಹ್ಯಾರಿಸ್ ರೌಫ್ ಸಂಭ್ರಮಿಸಿದ ರೀತಿ ಅದನ್ನೇ ಅನುಕರಣಿಸುವಂತ್ತಿತ್ತು. ಇದಕ್ಕೆ ಇವರು ಆಟಗಾರರಲ್ಲ ಜಿಹಾದಿಗಳು ಅಂತ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ತಿದ್ದಾರೆ. ಆಪರೇಷನ್ ಸಿಂಧೂರಕ್ಕೆ ಹೋಲಿಸಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಬ್ಬ ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ಇದು ಸ್ವೀಕೃತವಾದುದ್ದಲ್ಲ ಅಂತ ಹೇಳಿದ್ದಾರೆ.
ಆದ್ರೆ ಪಾಕ್ ಆಟಗಾರರನ್ನ ಟ್ರೋಲಿಗೆಳೆದಿರುವ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಮಾನ ಕಳೆದಿದ್ದಾರೆ. ಪಾಕಿಸ್ತಾನದ ಮಿಸೈಲ್‌ಗಳು ಹೀಗೇ ಬಿದ್ದಿದ್ದು ಅಲ್ವಾ? ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: Ind vs Pak | ಕಿರಿಕ್ ತೆಗೆದ ಹ್ಯಾರಿಸ್ ರೌಫ್‌ಗೆ ತಕ್ಕ ಉತ್ತರ ಕೊಟ್ಟ ಅಭಿಷೇಕ್ ಶರ್ಮಾ

ಈ ಎಲ್ಲ ಬೆಳವಣಿಗೆಗಳ ನಡುವೆ ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ (Pakistan Air Force) ನಡೆಸಿದ ವೈಮಾನಿಕ ದಾಳಿಯಲ್ಲಿ (Air Strike) ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ಇದನ್ನು ಉಲ್ಲೇಖಿಸಿ ಪಾಕ್ ಆಟಗಾರರಿಗೆ ಕೌಂಟರ್ ಕೊಡುವ ಕೆಲಸವನ್ನು ನೆಟ್ಟಿಗರು ಮಾಡ್ತಿದ್ದಾರೆ.
ಎಕೆ47 ಸಂಭ್ರಮ ಸಮರ್ಥಿಸಿಕೊಂಡ ಫರ್ಹಾನ್ 
ಇನ್ನೂ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಗನ್ ಸೆಲಬ್ರೇಷನ್ ಮಾಡಿದ ಸಾಹಿಬ್‌ಝಾದಾ ಫರ್ಹಾನ್ ತನ್ನ ವರ್ತನೆಯನ್ನ ಸಮರ್ಥಿಸಿಕೊಂಡಿದ್ದಾರೆ. ಜನ ಏನಂತಾರೆ ಅನ್ನೋದ್ರೆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಅಂತ ಹೇಳಿದ್ದಾರೆ.
ಅದು ಆಕ್ಷಣದ ಸಂಭ್ರಮವಾಗಿತ್ತು. ಸಾಮಾನ್ಯವಾಗಿ ನಾನು ಫಿಫ್ಟಿ ಬಾರಿಸಿದಾಗ ಹೆಚ್ಚು ಸಂಭ್ರಮ ಮಾಡಲ್ಲ. ಇದ್ದಕ್ಕಿದ್ದಂತೆ ನನ್ನ ಮನಸ್ಸಿಗೆ ಬಂದಿತು, ಹಾಗಾಗಿ ಮಾಡಿದೆ. ಅದನ್ನ ಹೇಗೆ ತೆಗೆದುಕೊಳ್ತಾರೆ ಅನ್ನೋದು ನನಗೆ ತಿಳಿದಿಲ್ಲ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದೂ ಇಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: Asia Cup 2025 | ಔಟ್ ಅಲ್ಲ ನಾಟೌಟ್ – ಅಂಪೈರ್ ತೀರ್ಪಿನ ವಿರುದ್ಧ ಸಿಡಿದ ಫಖರ್ ಝಮಾನ್
 


 
		 
		 
		 
		 
		
 
		 
		 
		 
		