ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಿ ಎರಡು ತಿಂಗಳುಗಳೇ ಕಳೆದಿವೆ. ಇಟಲಿಯಲ್ಲಿ ಮದುವೆ ಮಾಡಿಕೊಂಡ ಜೋಡಿ, ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ರು. ಆರತಕ್ಷತೆಯಲ್ಲಿ ‘ಮೇರೆ ರಶ್ಕೆ ಕಮರ್’ ಹಿಂದಿ ಹಾಡಿಗೆ ವಿರಾಟ್ ಮತ್ತು ಅನುಷ್ಕಾ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.
ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆಯಾಗುವ ಮೂಲಕ ವಿರುಷ್ಕಾ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇಟಲಿಯಿಂದ ಬಂದ ನಂತರ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ದೆಹಲಿಯಲ್ಲಿ ನಡೆದ ಆರತಕ್ಷತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸಿದ್ದರು. ದೆಹಲಿ ಬಳಿಕ ಮುಂಬೈನ ಸೆಂಟ್ ರೀಜಿಸ್ ನಲ್ಲಿ ಮಗದೊಮ್ಮೆ ಆರತಕ್ಷತೆ ಆಯೋಜನೆ ಮಾಡಲಾಗಿತ್ತು. ಮುಂಬೈನಲ್ಲಿ ಬಾಲಿವುಡ್ ತಾರೆಯರು ಮತ್ತು ಕೊಹ್ಲಿ ಸ್ನೇಹಿತರು ಆಗಮಿಸಿ ವಧು-ವರರಿಗೆ ಶುಭ ಕೋರಿದ್ರು. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ
ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಲಾರಾ ದತ್ತ, ಶಾರೂಖ್ ಖಾನ್ ಹಾಗೂ ಅವರ ಕುಟುಂಬದವರು, ಎ.ಆರ್ ರೆಹಮಾನ್, ಬೋಮನ್ ಇರಾನಿ, ರೇಖಾ, ಮಾಧುರಿ ದೀಕ್ಷಿತ್, ಶ್ರೀದೇವಿ, ಸಿದಾರ್ಥ್ ಮಲ್ಹೋತ್ರ, ರಣ್‍ಬೀರ್ ಕಪೂರ್, ವರುಣ್ ಧವನ್, ಕತ್ರಿನಾ ಕೈಫ್, ವಾಣಿ ಕಪೂರ್, ಪ್ರಿಯಾಂಕಾ ಚೋಪ್ರಾ, ಕಂಗನಾ ರಣೌತ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಆಗಮಿಸಿ ನವಜೋಡಿಗೆ ಶುಭಹಾರೈಸಿದ್ದರು. ಇದನ್ನೂ ಓದಿ: ಆರತಕ್ಷತೆಯಲ್ಲಿ ಶಾರುಖ್ ಜೊತೆ ಸ್ಟೆಪ್ ಹಾಕಿದ ಅನುಷ್ಕಾ ಶರ್ಮಾ
ಕ್ರೀಡಾ ತಾರೆಗಳಾದ ಎಂ.ಎಸ್ ಧೋನಿ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಸುನೀಲ್ ಗವಾಸ್ಕರ್, ಸೈನಾ ನೆಹ್ವಾಲ್, ಉಮೇಶ್ ಯಾದವ್, ಜಸ್‍ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜ, ಸೌರವ್ ಗಂಗೂಲಿ, ಅಶೀಶ್ ನೆಹೆರಾ ಆರತಕ್ಷತೆಗೆ ರಂಗು ತಂದಿದ್ದರು. ಇದನ್ನೂ ಓದಿ: ಮದ್ವೆ ಬಳಿಕ ಕೇಪ್‍ಟೌನ್ ನಲ್ಲಿ ವಿರುಷ್ಕಾ ಮೋಜು ಮಸ್ತಿ- ವಿರಾಟ್, ಅನುಷ್ಕಾ ಡ್ಯಾನ್ಸ್ ಮೋಡಿ
ಸದ್ಯ ಅನುಷ್ಕಾ ಶರ್ಮಾ ವರುಣ್ ಧವನ್‍ಗೆ ನಾಯಕಿಯಾಗಿ ‘ಸೂಯಿಧಾಗಾ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅನುಷ್ಕಾ ಅಭಿನಯದ ಹಾರರ್ ಸಿನಿಮಾ ‘ಪರಿ’ ಮಾರ್ಚ್ 3ರಂದು ತೆರೆಕಾಣಲಿದೆ. ಪರಿ ತನ್ನ ವಿಭಿನ್ನ ಟೀಸರ್ ಗಳ ಮೂಲಕ ಸಿನಿ ಅಂಗಳದಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಸೂಯಿಧಾಗಾ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.
https://www.instagram.com/p/BfEUGkMFx1U/?taken-by=_virat_18_lovers
https://www.instagram.com/p/BfBlWpplbNV/?taken-by=_virat_18_lovers