ಮಂಡ್ಯ: ಭಾರೀ ಮಳೆಯಿಂದಾಗಿ ಗಗನಚುಕ್ಕಿ ಜಲಪಾತ ಎಲ್ಲರ ಕಣ್ಮನ ಸೆಳೆಯುತ್ತಿದ್ದು, ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿ ಐಸಿರಿ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಪ್ರಕೃತಿ ಸೊಬಗಿನಲ್ಲಿ ಕಾವೇರಿ ಭೋರ್ಗರೆಯುತ್ತಿದ್ದಾಳೆ. ಸುಮಾರು ನೂರು ಮೀಟರ್ ಎತ್ತರದಿಂದ ಕಾವೇರಿ ಧುಮ್ಮಿಕ್ಕುತ್ತಿದ್ದಾಳೆ. ಕೆಆರ್‍ಎಸ್, ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುತ್ತಿರೋ ಹಿನ್ನೆಲೆಯಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ.
Advertisement
ಕಾವೇರಿ ಜಲಾನಯನ ಪ್ರದೇಶದಲ್ಲಿ ನಾಲ್ಕು ವರ್ಷಗಳಿಂದ ಕಡಿಮೆ ಪ್ರಮಾಣದ ಮಳೆ ಬಿದ್ದಿತ್ತು. ಹೀಗಾಗಿ ಗಗನಚುಕ್ಕಿ ಜಲಪಾತ ಕಳೆಗುಂದಿತ್ತು. ಈ ಬಾರಿ ಕೊಡಗು ವ್ಯಾಪ್ತಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದರಿಂದ ಕಾವೇರಿ ನದಿ ಮೈದುಂಬಿದೆ. ಜಲ ನೃತ್ಯ ವೈಭೋಗ ಕಣ್ಮುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.