ನವದೆಹಲಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ವಿದೇಶಿ ಪ್ರಜೆಯೊಬ್ಬರಿಂದ ದಂಡದ ರೂಪದಲ್ಲಿ 5,000 ರೂ. ಹಣ ಪಡೆದು ರಶೀದಿ ನೀಡದೇ ಭ್ರಷ್ಟಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ತಿಂಗಳ ಹಿಂದಿನ ಘಟನೆಯ ವೀಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ. ವೀಡಿಯೋದಲ್ಲಿ ಮಹೇಶ್ ಚಂದ್ ಎಂದು ಗುರುತಿಸಲಾದ ಪೊಲೀಸ್, ಸಂಚಾರ ಉಲ್ಲಂಘನೆಗಾಗಿ 5,000 ರೂ. ಪಾವತಿಸುವಂತೆ ಕೊರಿಯನ್ ವ್ಯಕ್ತಿಗೆ (Korean Man) ಹೇಳಿದ್ದಾರೆ. ವ್ಯಕ್ತಿ ಪೊಲೀಸರಿಗೆ 500 ರೂ. ನೀಡಲು ಮುಂದಾಗುತ್ತಾರೆ. ನಾನು ಕೇಳಿದ್ದು 500 ರೂ. ಅಲ್ಲ, 5,000 ರೂ. ಎಂದು ಪೊಲೀಸ್ (Delhi Police) ವಿವರಿಸುತ್ತಾರೆ. ಆ ವ್ಯಕ್ತಿ ತಕ್ಷಣವೇ ಪೊಲೀಸ್‌ಗೆ ಅಗತ್ಯವಿರುವ ಮೊತ್ತವನ್ನು ಹಸ್ತಾಂತರಿಸುತ್ತಾನೆ. ಕೊನೆಗೆ ಪೊಲೀಸ್‌ಗೆ ಹಸ್ತಲಾಘವ ಕೂಡ ಮಾಡ್ತಾನೆ. ಇದನ್ನೂ ಓದಿ: ಮುದ್ದಿನ ನಾಯಿ ನಾಪತ್ತೆ – ಭದ್ರತಾ ಸಿಬ್ಬಂದಿ ಅಮಾನತು ಮಾಡುವಂತೆ ಪೊಲೀಸ್ ಅಧಿಕಾರಿಗೆ ಪತ್ರ ಬರೆದ ನ್ಯಾಯಾಧೀಶ
ವಿದೇಶಿ ಪ್ರಜೆಯಿಂದ ಹಣ ಪಡೆದ ಪೊಲೀಸ್ ಯಾವುದೇ ರಶೀದಿ ನೀಡದೇ ಹೊರಟು ಹೋಗುತ್ತಾರೆ. ಈ ದೃಶ್ಯದ ವೀಡಿಯೋ ವೈರಲ್ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಭ್ರಷ್ಟಾಚಾರ ಎಸಗಿದ ಪೊಲೀಸ್‌ನನ್ನು ಅಮಾನತು ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ಗಮನದಲ್ಲಿಟ್ಟುಕೊಂಡು, ವೀಡಿಯೋದಲ್ಲಿ ಕಂಡುಬಂದಿರುವ ಸಂಬಂಧಿತ ಅಧಿಕಾರಿಯನ್ನು ವಿಚಾರಣೆಗೆ ಬಾಕಿಯಿರುವಂತೆ ಅಮಾನತುಗೊಳಿಸಲಾಗಿದೆ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಮಾನತುಗೊಂಡಿರುವ ಪೊಲೀಸ್, ನಾನು ರಶೀದಿ ನೀಡುವಷ್ಟರಲ್ಲಿ ಆ ವಿದೇಶಿ ಪ್ರಜೆ ಹೊರಟು ಹೋದ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಭೇಟಿಯಾಗಲು ಗ್ರಾಮದ ವಿದ್ಯುತ್ ಅನ್ನೇ ಕಡಿತಗೊಳಿಸ್ತಿದ್ದ ಯುವತಿ
Web Stories