CinemaKarnatakaLatestSandalwood

ಸ್ಯಾಂಡಲ್ ವುಡ್ ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ಒಡೆಯರಾದ ದರ್ಶನ್: ವಿಡಿಯೋ ನೋಡಿ

ಬೆಂಗಳೂರು: ಚಾಲೆಜಿಂಗ್ ಸ್ಟಾರ್ ದರ್ಶನ್ ಅವರನ್ನು ಸ್ಯಾಂಡಲ್‍ವುಡ್ ನ ದುಬಾರಿ ನಟ ಎಂದು ಕರೆಯುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಕೂಡ ಪಡೆಯುತ್ತಾರೆ. ಆದರೆ ಈಗ ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸುವ ಮೂಲಕ ಅದನ್ನು ನಿರೂಪಿಸಿದ್ದಾರೆ.

ಸಂಕ್ರಾಂತಿ ಹಬ್ಬದ ದಿನದಂದು ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಮೈಸೂರಿಗೆ ಹೊಸ ಕಾರಿನಲ್ಲಿ ಆಗಮಿಸಿ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಟ್ಟದ ಅರ್ಚಕರಿಂದ ಪೂಜೆ ಮಾಡಿಸಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ದರ್ಶನ್ ಅವರ ಜೊತೆಯಲ್ಲಿ ಅವರ ಹಲವು ಗೆಳೆಯರು ಸಾಥ್ ನೀಡಿದ್ದಾರೆ.

ದರ್ಶನ್ ಅವರಿಗೆ ಹೇಳಿ ಕೇಳಿ ಕಾರ್ ಮೇಲೆ ಹೆಚ್ಚು ಪ್ರೀತಿ. ಈಗಾಗಲೇ ದರ್ಶನ್ ಬಳಿ ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೆಂಜ್ ರೋವರ್, ಫಾರ್ಚ್ಯೂನರ್ ಕಾರುಗಳ ಕಲೆಕ್ಷನ್ ಇದೆ. ಆದರೆ ಇದೊಂದು ಲ್ಯಾಂಬೋರ್ಗಿನಿ ಕಾರ್ ಮಾತ್ರ ಇರಲಿಲ್ಲ. ಅಷ್ಟಕ್ಕೂ ನ್ಯೂ ಎಡಿಷನ್ ನ ಈ ಲ್ಯಾಂಬೋರ್ಗಿನಿ ಕಾರ್ ಬೆಲೆ ಬರೋಬ್ಬರಿ 5 ಕೋಟಿ ರೂ. ಎನ್ನಲಾಗಿದೆ.

ಬೆಂಗಳೂರಿನಲ್ಲಂತೂ ಕೆಲವೇ ಕೆಲವು ಗಣ್ಯರ ಬಳಿ ಈ ಕಾರ್ ಇದ್ದು, ಸ್ಯಾಂಡಲ್ ವುಡ್‍ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ದರ್ಶನ್ ಒಡೆಯರಾಗಿದ್ದಾರೆ. ಈ ಹಿಂದೆ ದರ್ಶನ್ ತಮ್ಮ ಬಳಿಯಿದ್ದ ಹಮ್ಮರ್ ಕಾರನ್ನು ಮಾರಾಟ ಮಾಡಿದ್ದರು.

ಸದ್ಯ ದರ್ಶನ್ ಈಗ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮುನಿರತ್ನ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ತಾರಾಂಗಣವಿರುವ ಈ ಸಿನಿಮಾ ಬಿಡುಗಡೆಗಾಗಿ ಕರ್ನಾಟಕ ಜನತೆ ಕಾಯುತ್ತಿದ್ದಾರೆ.

Leave a Reply

Your email address will not be published.

Back to top button