ಚೆನ್ನೈ: ನಟ ಮತ್ತು ನಿರ್ದೇಶಕ ಅರ್ಜುನ್ ಸರ್ಜಾ ಅವರು ತಮ್ಮ ಮನೆಯ ಮುಂಭಾಗ ಹನುಮಂತನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಈ ಮೂರ್ತಿಯನ್ನು ನಿರ್ಮಿಸುವಾಗ ಸ್ವತಃ ಅವರೇ ಡ್ರಿಲ್ಲಿಂಗ್ ಮಾಡಿದ್ದಾರೆ.
ಚಿಕ್ಕಂದಿನಿಂದಲೂ ಹನುಮಂತನ ದೈವ ಭಕ್ತರಾಗಿರುವ ಅರ್ಜುನ್ ಸರ್ಜಾ ಅವರಿಗೆ ತಮ್ಮ ಮನೆಯ ಮುಂಭಾಗ ಆಂಜನೇಯ ವಿಗ್ರಹವನ್ನು ಸ್ಥಾಪಿಸಬೇಕು ಎನ್ನುವ ಕನಸನ್ನು ಕಂಡಿದ್ದರು. ಕೊನೆಗೆ ಈ ಕನಸನ್ನು ಅವರು ನನಸು ಮಾಡಿದ್ದಾರೆ.
Advertisement
Advertisement
ಅರ್ಜುನ್ ಸರ್ಜಾ ಅವರ ಚೆನ್ನೈನಲ್ಲಿರುವ ಫಾರ್ಮ್ ಹೌಸ್ ಮುಂಭಾಗ 35 ಅಡಿ ಎತ್ತರದ ಧ್ಯಾನದ ರೂಪದಲ್ಲಿ ಕುಳಿತಿತುವ ಹನುಮಂತನ ಮೂರ್ತಿಯನ್ನು ಪ್ರತಿಷ್ಠಾಪನೆಯಾಗಿದೆ. ಈ ವಿಗ್ರಹದ ಕೆತ್ತನೆಯೂ 2013 ರಲ್ಲಿ ಪೂರ್ಣಗೊಂಡಿದ್ದು, ವಿಶೇಷ ಎಂದರೆ ಈ ವಿಗ್ರಹವನ್ನು ಕರ್ನಾಟಕದಲ್ಲಿ ಕೆತ್ತನೆ ಮಾಡಲಾಗಿದೆ.
Advertisement
ಅರ್ಜನ್ ಸರ್ಜಾ ಅವರು ಕೆತ್ತನೆ ಮಾಡುತ್ತಿರುವ ದೃಶ್ಯವನ್ನು ರೆಕಾರ್ಡ್ ಮಾಡಿದ್ದು, ಆ ವಿಡಿಯೋವನ್ನು ಅವರ ಮಗಳು ನಟಿ ಐಶ್ವರ್ಯ ಅರ್ಜುನ್ ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಪ್ಪನ ಕಾರ್ಯದ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.
Advertisement
ಚಿಕ್ಕವಯಸ್ಸಿನಿಂದಲೇ ಚಿತ್ರರಂಗದಲ್ಲಿ ಅಭಿನಯಿಸುತ್ತಿರುವ ಅರ್ಜುನ್ ಸರ್ಜಾ ಕನ್ನಡ ಅಲ್ಲದೇ ತೆಲುಗು, ತೆಮಿಳು ಸೇರಿದಂತೆ ಪಂಚಭಾಷೆಯಲ್ಲಿ ಅಭಿನಯಿಸಿದ್ದಾರೆ.
You're initiative and strength has created something that will go down to posterity!! Super proud pa!!! ???????????????? JAI ANJANEYA @akarjunofficial
For everyone who's been asking, this is located in Porur, Chennai and will be open to the general public very soon God willing ???????? pic.twitter.com/VgXtg64GHv
— Aishwarya Arjun (@aishwaryaarjun) April 28, 2018