ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) ನಟನೆಯ ‘ವಿದಾ ಮುಯರ್ಚಿ’ (Vidaamuyarchi) ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಈ ಚಿತ್ರದ ಮತ್ತೊಂದು ಪಾತ್ರದ ಬಗ್ಗೆ ಅನಾವರಣವಾಗಿದೆ. ಹೈವೇನಲ್ಲಿ ಅರ್ಜುನ್ ಸರ್ಜಾ ನಿಂತಿರುವ ಖಡಕ್ ಪೋಸ್ಟರ್‌ವೊಂದು ರಿಲೀಸ್ ಆಗಿದೆ. ಇದನ್ನೂ ಓದಿ:ಅಕ್ಕನ ಮದುವೆ ಸಂಭ್ರಮದಲ್ಲಿ ಮಿಂಚಿದ ಮೇಘಾ ಶೆಟ್ಟಿ
ಇತ್ತೀಚೆಗೆ ತ್ರಿಷಾ ಮತ್ತು ಅಜಿತ್ ಕುಮಾರ್ ಜೊತೆಯಾಗಿರುವ ರೊಮ್ಯಾಂಟಿಕ್ ಫೋಟೋವೊಂದು ವೈರಲ್ ಆಗಿತ್ತು. ಈಗ ಅರ್ಜುನ್ ಸರ್ಜಾ ಪಾತ್ರದ ಲುಕ್ ಅನಾವರಣ ಆಗಿದೆ. ಮಧ್ಯೆ ರೋಡ್‌ನಲ್ಲಿ ನಿಂತಿರುವ ಅರ್ಜುನ್ (Arjun Sarja) ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬ್ಯಾಕ್‌ಗ್ರೌಂಡ್‌ನಲ್ಲಿ ಅಜಿತ್ ಆಕೃತಿ ಎದ್ದು ಕಾಣಿಸುತ್ತಿದೆ.
Meet the Action King @akarjunofficial ???? Presenting the 4th look of VIDAAMUYARCHI. ????#VidaaMuyarchi #EffortsNeverFail#AjithKumar #MagizhThirumeni @LycaProductions #Subaskaran @gkmtamilkumaran @trishtrashers @akarjunofficial @anirudhofficial @Aravoffl @ReginaCassandra… pic.twitter.com/QUDtu6FcCx
— Lyca Productions (@LycaProductions) July 28, 2024
ಚಿತ್ರದಲ್ಲಿ ಅಜಿತ್‌ಗೆ ಖಳನಾಯಕನಾಗಿ ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದರ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಅಜಿತ್ ಕುಮಾರ್ ಮತ್ತು ತ್ರಿಷಾ (Trisha) ನಟನೆಯ ಈ ಚಿತ್ರವನ್ನು ಲೈಕಾ ಸಂಸ್ಥೆ ನಿರ್ಮಾಣ ಮಾಡಿದೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಕೂಡ ಮಾಹಿತಿ ಕೊಡಲಿದ್ದಾರೆ ಚಿತ್ರತಂಡ.