Connect with us

Bengaluru City

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡಾಭಿಮಾನಿಗಳಿಗೆ ಡಬಲ್ ಧಮಾಕಾ

Published

on

-ಮದ್ವೆಯಾದವ್ರು ಕೇಳಲೇ ಬೇಕು ‘ನಾನು ಮನೆಗೆ ಹೋಗಲ್ಲ’ ಹಾಡು

ಬೆಂಗಳೂರು: ಶರಣ್ ಅಭಿನಯದ ವಿಕ್ಟರಿ-2 ಸಿನಿಮಾ ಇದೇ ನವೆಂಬರ್ 1 ಅಂದ್ರೆ ಕನ್ನಡ ರಾಜ್ಯೋತ್ಸವ ದಿನದಂದು ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ತರುಣ್ ಸುಧೀರ್ ಟ್ವಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಡಬಲ್ ಫನ್ ಅಂತಾನೇ ಹೇಳಲಾಗುತ್ತಿದ್ದು, ಕನ್ನಡಾಭಿಮಾನಿಗಳು ರಾಜ್ಯೋತ್ಸವದಂದು ಸಿನಿಮಾ ನೋಡಿ ಎಂಜಾಯ್ ಮಾಡಬಹುದು.

ಈಗಾಗಲೇ ಟ್ರೇಲರ್, ಹಾಡು, ಫೋಟೋಗಳ ಮೂಲಕ ಜನರ ಮೆಚ್ಚುಗೆಯನ್ನು ವಿಕ್ಟರಿ-2 ಸಿನಿಮಾ ಪಡೆದುಕೊಂಡಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕುತೂಹಲವನ್ನು ಮೂಡಿಸಿದ್ದ ಚಿತ್ರ ಫಸ್ಟ್ ಲುಕ್‍ನಲ್ಲಿ ಶರಣ್ ದ್ವಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಚಿಕ್ಕ ಸುಳಿವು ನೀಡಿತ್ತು. ಫಸ್ಟ್ ಲುಕ್ ಬಳಿಕ ನಾಯಕ ನಟ ಶರಣ್, ರವಿಶಂಕರ್ ಮತ್ತು ಸಾಧುಕೋಕಿಲ ಹೆಣ್ಣು ವೇಷಧಾರಿಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದವು. ಇದನ್ನು ಓದಿ: ಎರಡನೇ ವಿಕ್ಟರಿಯಲ್ಲಿ ಡಬಲ್ ಫನ್ ಫಿಕ್ಸ್

ಅಕ್ಟೋಬರ್ 16ರಂದು ವಿಕ್ಟರಿ-2 ಚಿತ್ರದ `ನಾನು ಮನೆಗೆ ಹೋಗೋದಿಲ್ಲ’ ಹಾಡು ಮದುವೆ ಆದವರ ನೆಚ್ಚಿನ ಹಾಡು. ಕೇಳಲು ತುಂಬಾ ಕ್ಯಾಚಿಯಾಗಿದ್ದು, ಯೋಗರಾಜ್ ಭಟ್ಟರು ಲೇಖನಿಯಲ್ಲಿ ಮದುವೆಯಾದ ಗಂಡಸರಿಗೆ ಮತ್ತೊಂದು ಸ್ಪೆಷಲ್ ಹಾಡನ್ನು ನೀಡಿದ್ದಾರೆ. ಈ ಹಾಡು ಕೇಳಿದ ಪುನೀತ್ ರಾಜ್‍ಕುಮಾರ್, ಪ್ರಜ್ವಲ್ ದೇವರಾಜ್, ಲೂಸ್ ಮಾದಯೋಗಿ, ಉಪೇಂದ್ರ ಸಖತ್ ಆಗಿದೆ ಎಂದು ಕೊಂಡಾಡಿದ್ದಾರೆ. ಖಾಲಿ ಕ್ವಾಟರ್ ಬಾಟಲ್ ಹಂಗ ಲೈಫು ಎಂದು ಹಾಡಿದ್ದ ವಿಜಯ್ ಪ್ರಕಾಶ್ ನಾನು ಮನೆಗೆ ಹೋಗುದಿಲ್ಲ ಹಾಡಿಗೆ ಕಂಠದಾನ ನೀಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದನ್ನು ಓದಿ: ಪ್ಲೀಸ್ ಟ್ರಸ್ಟ್, ನಾನು ಚೀಪ್ & ಬೆಸ್ಟ್- ಆಸ್ಮಿತಾ ಜೊತೆ ವಿಕ್ಟರಿ ಶರಣ್ ಡ್ಯಾನ್ಸ್

ಕೆಲವು ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿಕ್ಟರಿ-2 ಸಿನಿಮಾ ಸೆಟ್ ಗೆ ಭೇಟಿ ನೀಡಿದ್ದರು. ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಸಹ ಹರಿದಾಡಿದ್ದವು. ಈ ಹಿಂದೆ ತರುಣ್ ನಿರ್ದೇಶನದ ‘ಚೌಕ’ ಸಿನಿಮಾದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತರುಣ್ ಮತ್ತು ದರ್ಶನ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರಿಂದ ಸಿನಿಮಾ ಸೆಟ್ ಗೆ ಭೇಟಿ ನೀಡಿದ್ದಾರೆಂದು ಹೇಳಲಾಗಿದೆ.

ಶರಣ್‍ಗೆ ನಾಯಕಿಯಾಗಿ ಅಪೂರ್ವ, ಅಸ್ಮಿತಾ ಸೂದ್ ಜೊತೆಯಾಗಿದ್ದಾರೆ. ರವಿಶಂಕರ್, ಸಾಧುಕೋಕಿಲಾ, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ವಿಕ್ಟರಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ತರುಣ್ ಸುಧೀರ್ ಕಥೆ ಬರೆದಿದ್ದು, ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *