ಸ್ವಾತಂತ್ರ‍್ಯ ದಿನಕ್ಕೆ ವೆಂಕಟೇಶ್ ‘ಸೈಂಧವ್’ ಟೀಮ್‌ನಿಂದ ಸ್ಪೆಷಲ್ ಗಿಫ್ಟ್- ಡಿಸೆಂಬರ್‌ 22ಕ್ಕೆ ಸಿನಿಮಾ ರಿಲೀಸ್

Public TV
1 Min Read
victory venkatesh

ಟಾಲಿವುಡ್ (Tollywood) ನಟ ವಿಕ್ಟರಿ ವೆಂಕಟೇಶ್ (Victory Venkatesh) ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ (Saindhav Film) ಭಾರೀ ನಿರೀಕ್ಷೆ ಹೆಚ್ಚಿಸಿದೆ. ಶೈಲೇಶ್ ಕೋಲನು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಇತ್ತೀಚೆಗೆಷ್ಟೇ ಮುಕ್ತಾಯಗೊಂಡಿತ್ತು. 18 ದಿನದ ಕಾಲ ನಡೆದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ 8 ಪ್ರಮುಖ ಸ್ಟಾರ್ ಭಾಗಿಯಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್ಸ್ ರಾಮ ಲಕ್ಷ್ಮಣ ಸಾಹಸ ನಿರ್ದೇಶನ  ಮಾಡಿದ್ದಾರೆ.

saindhav

ಸ್ವಾತಂತ್ರ‍್ಯ ದಿನದ ಅಂಗವಾಗಿ 8 ಸ್ಟಾರ್ಸ್ ಒಳಗೊಂಡ ಸಣ್ಣ ವಿಡಿಯೋ ಝಲಕ್ ನ್ನು ಬಿಡುಗಡೆ ಮಾಡಲಾಗಿದೆ. ವೆಂಕಟೇಶ್, ನವಾಜುದ್ದೀನ್ ಸಿದ್ದಿಕಿ, ಶ್ರದ್ಧಾ ಶ್ರೀನಾಥ್ (Shradha Srinath), ರುಹಾನಿ ಶರ್ಮಾ, ಆಂಡ್ರಿಯಾ ಜೆರೆಮಿಯಾ, ಸಾರಾ ಮತ್ತು ಜಯಪ್ರಕಾಶ್ ಪಾತ್ರಗಳನ್ನು ಪರಿಚಯ ಮಾಡಲಾಗಿದೆ. ಎಲ್ಲಾ ಅದ್ಭುತ ಕಲಾವಿದರನ್ನು ಒಟ್ಟಿಗೆ ನೋಡುವುದೇ ಕಣ್ಣಿಗೆ ಹಬ್ಬ. ಇದನ್ನೂ ಓದಿ:ಶಕ್ತಿಧಾಮದಲ್ಲಿ ಮಕ್ಕಳ ಜೊತೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಶಿವಣ್ಣ

saindhav film

ನಿಹಾರಿಕಾ ಎಂಟರ್ ಟೈನ್ಮೆಂಟ್ ನಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ‘ಸೈಂಧವ್’ ಸಿನಿಮಾದಲ್ಲಿ ಶ್ರದ್ದಾ ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಡಾ ರೇಣು ಪಾತ್ರದಲ್ಲಿ ರುಹಾನಿ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್ ಸಿನಿರಂಗ ಪ್ರವೇಶಿಸಿದ್ದಾರೆ.

ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಸೈಂಧವ್ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲ ನಿರ್ಮಾಣದಲ್ಲಿ ವಿನ್ಯಾಸ ಮಾಡಿದ್ದು, ಕಿಶೋರ್ ತಲ್ಲೂರ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೈಂಧವ್ ಸಿನಿಮಾವನ್ನು ಡಿಸೆಂಬರ್ 22 ರಂದು ಕ್ರಿಸ್ಮಸ್ ಹಬ್ಬದಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

Share This Article