ಕೊಲ್ಕತ್ತಾ: ಕೋಲ್ಕತ್ತಾ ಪೊಲೀಸ್ ಆಯುಕ್ತರನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡುವ ಮೂಲಕ ನಮಗೆ ನೈತಿಕ ಗೆಲುವು ಸಿಕ್ಕಿದೆ. ಹಾಗೂ ಈ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜೆಗಳಿಗಿಂತ ಯಾರೂ ದೊಡ್ಡವರಲ್ಲ. ಪ್ರಜಾಪ್ರಭುತ್ವವೇ ದೇಶದ ಒಡೆಯ. ನಾವು ಸಾಕ್ಷಿ ನಾಶ ಮಾಡುತ್ತಿದ್ದೇವೆ ಅಂತ ಆರೋಪಿಸಿದ್ದರು. ಅದು ಸುಳ್ಳಾಗಿದೆ. ರಾಜೀವ್ ಕುಮಾರ್ ಪ್ರಕರಣ ಗೆಲುವು ಕೇವಲ ನನ್ನದಲ್ಲ. ಬಂಗಾಳ ಜನತೆ, ಸೇವ್ ಇಂಡಿಯಾ ಕ್ಯಾಂಪೇನ್ ಹಾಗೂ ಸಂವಿಧಾನದ ಗೆಲುವು ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಮಮತಾ ಬ್ಯಾನರ್ಜಿ ಗುಡುಗಿದರು. ಇದನ್ನು ಓದಿ: ಸಿಬಿಐ ವಿಚಾರಣೆಗೆ ರಾಜೀವ್ ಕುಮಾರ್ ಹಾಜರಾಗಬೇಕು: ಕೋರ್ಟ್ ಕಲಾಪ ಹೀಗಿತ್ತು
Advertisement
West Bengal CM Mamata Banerjee on SC will direct the Police Commissioner, Kolkata to make himself available&fully cooperate: Rajeev Kumar never said he'll not be available. He said we want to meet at mutual place,if you want to ask for any clarification, you can come & we can sit pic.twitter.com/5gLZ4lBi2o
— ANI (@ANI) February 5, 2019
Advertisement
ಪ್ರಕರಣದ ಕುರಿತು ವಿಚಾರಣೆ ನಡೆಯದೇ ಏಕಾಏಕಿ ಸಿಬಿಐ ಅಧಿಕಾರಿಗಳು ರಾಜೀವ್ ಕುಮಾರ್ ಅವರನ್ನು ಭಾನುವಾರ ಬಂಧಿಸಲು ಮುಂದಾಗಿದ್ದರು. ಆದರೆ ಈಗ ಕೋರ್ಟ್ ಆದೇಶದಿಂದ ರಾಜೀವ್ ಕುಮಾರ್ ಅವರನ್ನು ಬಂಧಿಸುವಂತಿಲ್ಲ. ಇಬ್ಬರಿಗೂ ಒಪ್ಪಿಗೆಯಾದ ಸ್ಥಳದಲ್ಲಿ ವಿಚಾರಣೆ ನಡೆಸಬೇಕು ಎನ್ನುವ ಆದೇಶ ನೀಡಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಜನರಿಗೆ, ರೈತರು, ಕಲಾವಿದರು ಸೇರಿದಂತೆ ಅನೇಕರಿಗೆ ತೊಂದರೆ ಕೊಟ್ಟಿದ್ದಾರೆ. ಹೀಗಾಗಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ ಎಂದು ಕುಟುಕಿದರು. ಇದನ್ನು ಓದಿ: ಮಮತಾ ಪರ ಬ್ಯಾಟಿಂಗ್ ಮಾಡಿದ ರಾಹುಲ್ ನಿಲುವಿಗೆ ಬಂಗಾಳ ಕಾಂಗ್ರೆಸ್ ವಿರೋಧ
Advertisement
ಕೇಂದ್ರ ಸರ್ಕಾರವು ಎಲ್ಲರನ್ನೂ ಬಂಧಿಸಿ, ರೈಲಿಗೆ ಕಳುಹಿಸಲು ಮುಂದಾಗಿದೆ. ಈ ನೀತಿಯ ವಿರುದ್ಧ ನಾನು ಈ ಧರಣಿ ಮುಂದುವರಿಸಬೇಕಾದರೆ ಇತರ ನಾಯಕರನ್ನು ಭೇಟಿ ಮಾಡುವೆ. ನಾನು ಒಬ್ಬಳೇ ಹೋರಾಡುವುದಿಲ್ಲ. ಈ ನಿಟ್ಟಿನಲ್ಲಿ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಒಡಿಶಾ ಸಿಎಂ ನವೀನ್ ಪಾಟ್ನಾಯಕ್ ಸೇರಿದಂತೆ ಅನೇಕರ ಬೆಂಬಲ ಪಡೆಯುತ್ತೇನೆ ಎಂದು ಹೇಳಿದರು.
ರಾಜೀವ್ ಕುಮಾರ್ ವಿರುದ್ಧ ಅವರು ಹಲವಾರು ಆರೋಪಗಳನ್ನು ಮಾಡಲಾಗಿತ್ತು. ಜೊತೆಗೆ ನಾವು ನ್ಯಾಯಾಂಗ ನಿಂದನೆ ಮಾಡಿದ್ದೇವೆ ಎಂದು ಅವರು ದೂರಿದ್ದರು. ಇದು ತಿರಸ್ಕೃತವಾಗಿದೆ ಎಂದು ಹೇಳಿದರು.
ಚಿಟ್ ಫಂಡ್ ಬಹುಕೋಟಿ ಹಗರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ. ಅಸ್ಸಾಂ ಉಪ ಮುಖ್ಯಮಂತ್ರಿಗಳು 3 ಕೋಟಿ ರೂ. ಪಡೆದಿದ್ದರು. ಅವರನ್ನು ಬಂಧಿಸಲಾಗಿದೆಯೇ? ರೋಸ್ ವ್ಯಾಲಿ ಗ್ರೂಪ್‍ನ ರೋಸ್ ಅಂತ ಕರೆದುಕೊಂಡಿದ್ದ ಬಾಬುಲ್ ಸುಪ್ರಿಯೋ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.
#WATCH WB CM Mamata Banerjee:Ask Yogi to take care of Uttar Pradesh first. So many ppl have been killed,even police were murdered,so many ppl were lynched,he himself will lose if he contests elections.He doesn’t have a place to stand in UP that’s why he's roaming around in Bengal pic.twitter.com/ijtBwTHdvX
— ANI (@ANI) February 5, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv