-ಟೀಸರ್ ನಲ್ಲಿ ಡಬಲ್ ಫನ್ ಗ್ಯಾರೆಂಟಿ
ಬೆಂಗಳೂರು: ಸ್ಯಾಂಡಲ್‍ವುಡ್ ಅಧ್ಯಕ್ಷ, ಶರಣ್ ತಮ್ಮ ಎರಡನೇ ವಿಕ್ಟರಿಯಲ್ಲಿ ಅಭಿಮಾನಿಗಳನ್ನು ರಂಜಿಸಲು ಬರಲಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ವಿಕ್ಟರಿ-2 ಚಿತ್ರದ ಟೀಸರ್ ಸೋಮವಾರ ಬಿಡುಗಡೆ ಆಗಲಿದ್ದು, ಚಂದನವನದಲ್ಲಿ ತೀವ್ರ ಕುತೂಹಲವನ್ನು ಹುಟ್ಟಿಸಿದೆ. ಈಗಾಗಲೇ ತನ್ನ ಫಸ್ಟ್ ಲುಕ್ ನಿಂದ ಡಬಲ್ ಫನ್ ನೀಡೋದು ಖಚಿತ ಎಂಬ ಭರವಸೆಯನ್ನು ಚಿತ್ರ ಮೂಡಿಸಿದೆ.
ವಿಕ್ಟರಿ-2 ಸಿನಿಮಾದಲ್ಲಿ ಶರಣ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವಿಷಯವನ್ನು ಚಿತ್ರತಂಡ ಫಸ್ಟ್ ಲುಕ್ ನಲ್ಲಿಯೇ ರಿವೀಲ್ ಮಾಡಿತ್ತು. ಕ್ಲಾಸ್ ಮತ್ತು ಮಾಸ್ ಎರಡು ವಿಭಿನ್ನ ಪಾತ್ರಗಳಲ್ಲಿ ಶರಣ್ ಕಾಣಿಸಿಕೊಳ್ಳಲಿದ್ದು, ಸೋಮವಾರ ಟೀಸರ್ ನಲ್ಲಿ ಶರಣ್ ನ್ಯೂ ಗೆಟಪ್ ರಿವೀಲ್ ಆಗಲಿದೆ. ಮೊದಲ ವಿಕ್ಟರಿಯಲ್ಲಿ ಜನರನ್ನು ಹಾಸ್ಯದ ಕಚಗುಳಿಯಲ್ಲಿ ತೇಲಿಸಿದ್ದರು. ಹಾಸ್ಯಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಪ್ರೇಕ್ಷಕರಿಗೆ ಡಬಲ್ ಮನರಂಜನೆಯ ಭರವಸೆಯನ್ನು ಮೂಡಿಸಿದೆ.
ಫಸ್ಟ್ ಲುಕ್‍ನಲ್ಲಿ ಒಟ್ಟು ಎರಡು ಫೋಟೋಗಳನ್ನು ಚಿತ್ರತಂಡ ಬಿಡುಗೊಡೆಗೊಳಿಸಿತ್ತು. ಒಂದರಲ್ಲಿ ವೈಟ್ ಆ್ಯಂಡ್ ವೈಟ್ ಶರ್ಟ್, ಪಂಚೆ ತೊಟ್ಟು ಮಿಂಚಿದರೆ, ಇನ್ನೊಂದರಲ್ಲಿ ಮಾಸ್ ಗೆಟಪ್ ನಲ್ಲಿ ಕಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಶರಣ್‍ಗೆ ನಾಯಕಿಯಾಗಿ ಅಪೂರ್ವ, ಅಸ್ಮಿತಾ ಸೂದ್ ಜೊತೆಯಾಗಿದ್ದಾರೆ. ರವಿಶಂಕರ್, ಸಾಧುಕೋಕಿಲಾ, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ವಿಕ್ಟರಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ತರುಣ್ ಸುದೀರ್ ಕಥೆ ಬರೆದಿದ್ದು, ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ.
Await for the double fun..#Viictory2 teaser out from tmrw..
@sharanhruday @IamAsmitaSood @TharunSudhir @ArjunjanyaAJ #AnandAudio https://t.co/IKwWnRKH9C pic.twitter.com/NYk0mCjkot
— aanandaaudio (@aanandaaudio) August 26, 2018