ಸಿಡ್ನಿ: 2019ರ ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟವನ್ನು ಉಡುಪಿ ಮೂಲದ ಪ್ರಿಯಾ ಸೆರಾವೋ ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ. ಗುರುವಾರ ಮೆಲ್ಬರ್ನ್ ನಗರದ ಪಂಚತಾರಾ ಹೋಟೆಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ 27 ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಆಗಿ ಪ್ರಿಯಾ ಹೊರ ಹೊಮ್ಮಿದ್ದಾರೆ. ಉಗಾಂಡ ಮೂಲದ ಬೆಲ್ಲಾ ಕಸಿಂಬಾ ದ್ವಿತೀಯಾ ಸ್ಥಾನಕ್ಕೆ ತೃಪ್ತಿಪಟ್ಟರು.
ಕಾನೂನು ಪದವಿಧರೆಯಾಗಿರುವ 26 ವರ್ಷದ ಪ್ರಿಯಾ ಮೆಲ್ಬರ್ನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಡುಪಿಯ ಬೆಳ್ಮಣ್ಣುವಿನ ಮೂಲದ ಪ್ರಿಯಾ 11 ವರ್ಷದವರಿದ್ದಾಗ ಪೋಷಕರೊಂದಿಗೆ ದುಬೈ, ಒಮನ್ ನತ್ತ ವಲಸೆ ಬಂದಿದ್ದರು. ಸದ್ಯ ಮೆಲ್ಬರ್ನ್ ನಲ್ಲಿ ವಾಸವಾಗಿದ್ದಾರೆ. ಗೆಲುವಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರಿಯಾ ಸೆರಾವೋ, ಆಸ್ಟ್ರೇಲಿಯಾದ ಬಹುತೇಕ ವಲಯಗಳಲ್ಲಿ ಅನ್ಯರು ಕಾಣಿಸುವುದಿಲ್ಲ. ಹಾಗಾಗಿ ನನ್ನ ಗೆಲುವು ಸಾಂಸ್ಕೃತಿಕ ವೈವಿಧ್ಯತೆಗೆ ಸಂದ ಗೌರವವಾಗಿದೆ ಎಂದಿದ್ದಾರೆ.
https://www.instagram.com/p/Bw3BwC1jPBS/?utm_source=ig_embed
ಪ್ರಶ್ನೋತ್ತರ ಸುತ್ತಿನಲ್ಲಿ ತೀರ್ಪುಗಾರರು, ನಿಮ್ಮ ಪ್ರಕಾರ ಟೀನೇಜ್ ಯುವತಿಯರಿಗೆ ಯಾರು ಪಾಸಿಟಿವ್ ಮಾಡೆಲ್ (ಆದರ್ಶ ವ್ಯಕ್ತಿ) ಆಗುತ್ತಾರೆ ಮತ್ತು ಯಾಕೆ ಎಂದು ಕೇಳಲಾಗಿತ್ತು. 16 ವರ್ಷದ ಗ್ರೇಟಾ ಥನ್ಬರ್ಗಾ ಟೀನೇಜ್ ಯುವತಿಯರಿಗೆ ಮಾದರಿ ಆಗುತ್ತಾರೆ. ಆಕೆ ಸಿಂಡ್ರೋಮ್ (Asperger syndrome) ನಿಂದ ಬಳಲುತ್ತಿದ್ದರೂ, ತನ್ನ ಹೋರಾಟವನ್ನು ಬಿಟ್ಟಿಲ್ಲ. ಹವಾಮಾನ ಬದಲಾವಣೆಯ ನಿಯಂತ್ರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳ ಮುನ್ನಡೆ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ.
https://www.instagram.com/p/BxyZ33dj1Tc/
ಸ್ಪರ್ಧೆಯಿಂದ ಬಂದಿರೋ 20 ಸಾವಿರ ಡಾಲರ್ (9.68 ಲಕ್ಷ ರೂ.) ಹಣವನ್ನ ಸಾರ್ವಜನಿಕ ನೀತಿ (Public Policy) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ವ್ಯಯಿಸುತ್ತೇನೆ ಎಂದು ಪ್ರಿಯಾ ತಿಳಿಸಿದ್ದಾರೆ.
ಪ್ರಿಯಾ ಸೆರೆವೋ ತಂದೆ ಕಿನ್ನಿಗೋಳಿಯವರಾಗಿದ್ದು, ತಾಯಿ ಬೆಳ್ಮಣ್ಣುವರಾಗಿದ್ದಾರೆ. ಸುಮಾರು 16 ವರ್ಷಗಳ ಹಿಂದೆಯೇ ದುಬೈ, ಒಮನ್ ನತ್ತ ವಲಸೆ ಹೋಗಿದ್ದರಿಂದ ಪ್ರಿಯಾರ ಶಿಕ್ಷಣ ವಿದೇಶದಲ್ಲಿ ಮುಗಿದಿದೆ.