ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳೇ ಹಾಗೆ ರೋಗಿಗಳಿಗೆ ಸರಿಯಾದ ಟ್ರೀಟ್‍ಮೆಂಟ್ ಕೊಡುವುದನ್ನು ಬಿಟ್ಟು ಬೇರೆಲ್ಲ ಕೆಲಸಗಳನ್ನು ಮಾಡುತ್ತವೆ. ಇಂತಹದ್ದೊಂದು ಎಡವಟ್ಟನ್ನು ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬೋರೇಟರಿ ಮಾಡಿದೆ.
ಕಿಡ್ನಿಯಲ್ಲಿ ಕಲ್ಲಾಗಿದೆ ಅಂತ ವಿಕ್ಟೋರಿಯ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡ ರೋಗಿಯೊಬ್ಬರಿಗೆ ಏನು ಆಗಿಲ್ಲ ಅಂತ ಲ್ಯಾಬ್ ಸಿಬ್ಬಂದಿ ರಿಪೋರ್ಟ್ ಕೊಟ್ಟಿದ್ದಾರೆ. ರಿಪೋರ್ಟ್ ನಲ್ಲಿ ನೋ ಪ್ರಾಬ್ಲಂ ಅಂತ ಬಂದ ಹಿನ್ನೆಲೆಯಲ್ಲಿ ರೋಗಿ ಸುಮ್ಮನಾಗಿದ್ದಾರೆ. ಆದರೆ ಕೆಲವು ದಿನಗಳ ನಂತರ ಇವರಿಗೆ ಮತ್ತೆ ನೋವು ಕಾಣಿಸಿಕೊಂಡಿದೆ. ಖಾಸಗಿ ಲ್ಯಾಬೋರೇಟರಿನಲ್ಲಿ ಮತ್ತೆ ಸ್ಕ್ಯಾನಿಂಗ್ ಮಾಡಿಸಿದಾಗ ಕಿಡ್ನಿಯಲ್ಲಿ ಕಲ್ಲಾಗಿದೆ ಅನ್ನೋ ರಿಪೋರ್ಟ್ ಬಂದಿದೆ. ಇದನ್ನು ನೋಡಿದ ರೋಗಿ ಶಾಕ್ ಆಗಿದ್ದಾರೆ.
Advertisement
Advertisement
ಖಾಸಗಿ ಲ್ಯಾಬ್ ರಿಪೋರ್ಟ್ ತೆಗೆದುಕೊಂಡು ವಿಕ್ಟೋರಿಯಾ ಆಸ್ಪತ್ರೆಗೆ ಹೋದಾಗ, ಲ್ಯಾಬ್ ಸಿಬ್ಬಂದಿ ಆ ಹಳೆಯ ರಿಪೋರ್ಟ್ ವಾಪಸ್ ಇಸ್ಕೊಂಡಿದ್ದಾರೆ. ಹೊಸದಾಗಿ ಸ್ಕ್ಯಾನ್ ಮಾಡಿ ಕಿಡ್ನಿಯಲ್ಲಿ ಕಲ್ಲಿರುವುದನ್ನು ದೃಢಪಡಿಸಿ ಇನ್ನೊಂದು ರಿಪೋರ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕರನ್ನು ಕೇಳಿದರೆ ಏನೋ ಎಡವಟ್ಟು ಆಗಿದೆ. ಸರಿಪಡಿಸಿದರೆ ಆಯ್ತು ಬಿಡಿ ಅನ್ನೋ ಉಡಾಫೆ ಉತ್ತರ ಕೊಡುತ್ತಿದ್ದಾರೆ ಎಂದು ನೊಂದ ರೋಗಿ ಬಿ.ಎಸ್.ಗೌಡ ಹೇಳಿದ್ದಾರೆ.
Advertisement
ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಹೋದರೆ ಯಾವ ರೀತಿ ಸೇವೆ ಸಿಗುತ್ತೆ ಅನ್ನೋದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ. ಇಂತಹ ನೂರು ಪ್ರಕರಣಗಳು ರಾಜ್ಯದಲ್ಲಿ ಪ್ರತಿನಿತ್ಯ ಕಂಡು ಬರುತ್ತವೆ. ಇನ್ನಾದರೂ ಅಧಿಕಾರಿಗಳು ಇಂತವರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv