ಕೈದಿ ನಂಬರ್ 4567 – ಕೋರ್ಟ್‌ನಲ್ಲಿ ರೇವಣ್ಣ ಕಣ್ಣೀರು!

Public TV
1 Min Read
victim Kidnap Case Bengaluru court sends H D Revanna to judicial custody until May 14

ಬೆಂಗಳೂರು: ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (Kidnap Case) ಬಂಧಿಸಲಾಗಿರುವ ಹೆಚ್.ಡಿ ರೇವಣ್ಣ (HD Revanna) ಜೈಲುಪಾಲಾಗಿದ್ದಾರೆ.

4 ದಿನಗಳ ವಿಶೇಷ ತನಿಖಾ ದಳ (SIT) ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಹಾಗಾಗಿ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial Custody) ಜಡ್ಜ್ ಆದೇಶಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ- ಡಿಕೆಶಿಗೆ ದೇವರಾಜೇಗೌಡ ಓಪನ್‌ ಚಾಲೆಂಜ್

 

ಇಂದಿನಿಂದ 7 ದಿನಗಳವರೆಗೆ ರೇವಣ್ಣ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಇರಲಿದ್ದಾರೆ. ಜೀರೋ ಟ್ರಾಫಿಕ್‌ನಲ್ಲಿ ಎಸ್‌ಐಟಿ ಮಧ್ಯಾಹ್ನ 4:15ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ರೇವಣ್ಣರನ್ನು ಕರೆದೊಯ್ಯಿತು.

ಜೈಲು ವೈದ್ಯರು ಬಿಪಿ, ಶುಗರ್ ಸೇರಿದಂತೆ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕ್ವಾರಂಟೈನ್ ಸೆಲ್‌ಗೆ ರೇವಣ್ಣರನ್ನು ಶಿಫ್ಟ್ ಮಾಡಲಾಗಿದೆ. ರೇವಣ್ಣಗೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ವಿಚಾರಣಾ ಕೈದಿ ನಂಬರ್ 4567 ನೀಡಿದ್ದಾರೆ. ಕೋರ್ಟ್ ಜೈಲಿನ ಆದೇಶ ನೀಡುತ್ತಿದ್ದಂತೆಯೇ ರೇವಣ್ಣ ಕಣ್ಣೀರಿಟ್ಟಿದ್ದಾರೆ ಅಂತ ತಿಳಿದು ಬಂದಿದೆ.

ಕೋರ್ಟ್‌ಗೆ ಹಾಜರುಪಡಿಸುವ ಮೊದಲು ಹೊಟ್ಟೆ ನೋವಿನಿಂದ ಬಳಲಿದ್ದ ರೇವಣ್ಣಗೆ ವಿಕ್ಟೋರಿಯಾದದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹರ್ನಿಯಾ ಸಮಸ್ಯೆ ಎನ್ನಲಾಗಿದ್ದು, ಎಂಡೋಸ್ಕೋಪಿಯಲ್ಲಿ ಎಲ್ಲವೂ ನಾರ್ಮಲ್ ಎಂಬ ವರದಿ ಬಂದಿದೆ. ಇದನ್ನೂ ಓದಿ: 7 ದಿನಗಳ ಒಳಗಡೆ ವಿಚಾರಣೆಗೆ ಹಾಜರಾಗಿ – ನಡ್ಡಾ, ವಿಜಯೇಂದ್ರಗೆ ಬೆಂಗಳೂರು ಪೊಲೀಸರಿಂದ ಸಮನ್ಸ್‌

 

Share This Article