7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ

Public TV
1 Min Read
Vicky Kaushal

ಮುಂಬೈ: ಬಾಲಿವುಡ್ ಸ್ಟಾರ್ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ತಯಾರಿ ಬರದಿಂದ ಸಾಗುತ್ತಿದ್ದು, ರಾಜಮನೆತನದಂತೆ ಮದುವೆಗೆ ವಿಕ್ಕಿ 7 ಕುದುರೆಗಳ ಜೊತೆ ಬರುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

Vicky Kaushal Katrina Kaif 1

ಕೆಲವೇ ದಿನಗಳಲ್ಲಿ ವಿಕ್ಕಿ-ಕತ್ರಿನಾ ಮದುವೆ ಸಮಾರಂಭ ನಡೆಯಲಿದ್ದು, ಇದಕ್ಕಾಗಿ ಹಲವು ಸಿದ್ಧತೆಗಳು ನಡೆಯುತ್ತಿದೆ. ಇವರ ವಿವಾಹವು ರಾಜಸ್ಥಾನದ ಖಾಸಗಿ ಹೋಟೆಲ್ ನ ಗಾಜಿನ ಮಂಟಪದಲ್ಲಿ ಇವರಿಬ್ಬರ ಮದುವೆ ಸಮಾರಂಭ ನಡೆಯುತ್ತಿದೆ. ಈ ನಡುವೆ ವರದಿಗಳ ಪ್ರಕಾರ ವಿಕ್ಕಿ ಮದುವೆ ಮಂಟಪಕ್ಕೆ 7 ಬಿಳಿ ಕುದುರೆ ಮೇಲೆ ರಾಯಲ್ ಆಗಿ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ತಿಳಿದುಬಂದಿದೆ. ಇದನ್ನೂ ಓದಿ: ವಿಜಯ್ ಸೇತುಪತಿ ಜೊತೆ ನಟಿಸಲು ಸೈ ಎಂದ ಸ್ವೀಟಿ

FotoJet 4 7

ವಿಕ್ಕಿ-ಕತ್ರಿನಾ ತಮ್ಮ ಮದುವೆ ಬಗ್ಗೆ ದೊಡ್ಡ ಕನಸನ್ನು ಹೊಂದಿದ್ದು, ಆ ರೀತಿಯಲ್ಲಿಯೇ ಮದುವೆಯಾಗಬೇಕು ಎಂದು ಹಲವು ರೀತಿಯಲ್ಲಿ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಕತ್ರಿನಾ-ವಿಕ್ಕಿ ಕೌಶಲ್ ಮದುವೆಯಾಗುವ ದಿನ ಹತ್ತಿರವಾಗುತ್ತಿದೆ. ರಾಜಸ್ಥಾನದಲ್ಲಿ ತಮ್ಮ ಅದ್ಧೂರಿ ಮದುವೆಗೆ ಮುಂಚಿತವಾಗಿ ಕತ್ರಿನಾ ಅವರ ಕುಟುಂಬ ಭಾನುವಾರ ಸಂಜೆ ವಿಕ್ಕಿ ಮನೆಗೆ ಊಟಕ್ಕೆ ಹೋಗಿದ್ದರು.

katrina kaif collage

ವಿಕ್ಕಿ ತಂದೆ ಶಾಮ್ ಕೌಶಲ್ ಇವರ ಮದುವೆಗಾಗಿ ಭಾರಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು, ವಧು-ವರರನ್ನು ಅಲಂಕಾರ ಮಾಡುವವರಿಂದ ಹಿಡಿದು ಪ್ರತಿಯೊಂದನ್ನು ಸೂಕ್ಷ್ಮವಾಗಿ ಆಯೋಜಿಸುತ್ತಿದ್ದಾರೆ. ಎರಡು ಕುಟುಂಬದ ಸದಸ್ಯರು ಮದುವೆ ಸ್ಥಳಕ್ಕೆ ಇಂದು ತೆರಳಲಿದ್ದು, ಡಿಸೆಂಬರ್ 7 ರಂದು ಹಬ್ಬದ ರೀತಿ ಮದುವೆ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್

ಮದುವೆ ಮಂಟಪಕ್ಕೆ ಬಂದ ಸೆಲೆಬ್ರಿಟಿಗಳು ಫೋಟೋ ಕ್ಲಿಕ್ಕಿಸಿದಂತೆ ಮಾರ್ಗಸೂಚನೆಯನ್ನು ನೀಡಲಾಗಿದ್ದು, ಇದನ್ನು ನೋಡಿಕೊಳ್ಳಲು 100 ಬೌನ್ಸರ್‍ಗಳನ್ನು ನಿಯೋಜನೆ ಮಾಡಲಾಗಿದೆ. ವಿಕ್ಕಿ-ಕತ್ರಿನಾ ಮದುವೆಯ ಅಪ್ಡೇಟ್ ಕೇಳುತ್ತಿದ್ದರೆ ಇವರ ಮದುವೆ ಯಾವ ರೀತಿ ನಡೆಯಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದ್ದು, ಅಭಿಮಾನಿಗಳು ಮಾತ್ರ ಸಖತ್ ಥ್ರಿಲ್ ಆಗಿ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *