ಮದುವೆ ಸಂಭ್ರಮ ನನ್ನ ಜೀವನದ ಅತ್ಯುತ್ತಮ ದಿನಗಳು: ವಿಕ್ಕಿ ಕೌಶಲ್

Public TV
1 Min Read
vikki kaushal

ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕಳೆದ ವರ್ಷ ಅಂತ್ಯದಲ್ಲಿ ಹಸೆಮಣೆ ಏರಿದ್ದರು. ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಬ್ರೇಕ್ ತೆಗೆದುಕೊಂಡು ವಿದೇಶದಲ್ಲಿ ರೌಂಡ್ ಹಾಕ್ತಿದ್ದಾರೆ. ಇದೀಗ ಕತ್ರಿನಾ ಜತೆಗಿನ ಮದುವೆಯ ಬಳಿಕ ಜೀವನ ಹೇಗಿದೆ ಅಂತಾ ವಿಕ್ಕಿ ಕೌಶಲ್ ಸಂದರ್ಶನವೊಂದರಲ್ಲಿ ಹೆಳಿಕೊಂಡಿದ್ದಾರೆ.

Katrina Kaif 3

ಚಿತ್ರರಂಗದಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಒಟ್ಟಿಗೆ ನಟಿಸದೇ ಇದ್ದರು, ಪರಿಚಿಯದ ಶುರುವಾದ ಸ್ನೇಹ ನಂತರ ಹಸೆಮಣೆ ಏರುವ ಮೂಲಕ ಈ ಜೋಡಿ ಸುದ್ದಿ ಮಾಡಿದ್ದರು. ಇದೀಗ ಸಂತೋಷದಿಂದ ಇಬ್ಬರು ಸಂಸಾರ ಸಾಗುತ್ತಿದ್ದಾರೆ. ಕತ್ರಿನಾ ಅವರನ್ನು ಮದುವೆ ಆದ ಮೇಲೆ ಜೀವನದಲ್ಲಿ ಸೆಟೆಲ್ ಆದೆ ಎನ್ನುವ ಭಾವನೆ ವಿಕ್ಕಿಯಲ್ಲಿ ಮೂಡಿದೆ. ಈ ಬಗ್ಗೆ ವಿಕ್ಕಿ ಮಾತನಾಡಿದ್ದಾರೆ. ಇದನ್ನೂ ಓದಿ: ಗ್ರೀನ್ ಇಂಡಿಯಾ ಅಭಿಯಾನಕ್ಕೆ ಸಲ್ಮಾನ್ ಖಾನ್‌ ಸಾಥ್: ಗಿಡ ನೆಡುವಂತೆ ಫ್ಯಾನ್ಸ್‌ಗೆ ಸಲ್ಲು ಮನವಿ

katrina kaif 2 1

ಎಲ್ಲವೂ ಸಂತಸದಿಂದ ಸಾಗುತ್ತಿದೆ. ಜೀವನದಲ್ಲಿ ನಾನು ಸೆಟೆಲ್ ಆದೆ ಎನ್ನುವ ಭಾವನೆಯಿದೆ. ವೃತ್ತಿ ಮತ್ತು ವಯಕ್ತಿಕ ಎರಡಲ್ಲೂ ದೇವರು ನನ್ನ ಮೇಲೆ ದಯೆ ತೋರಿದ್ದಾರೆ ಎಂದು ತಮ್ಮ ಖುಷಿಯನ್ನು ವಿಕ್ಕಿ ಹಂಚಿಕೊಂಡಿದ್ದಾರೆ.

KATRINA KAIF

ಬಿಟೌನ್ ಸ್ಟಾರ್ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಡೇಟಿಂಗ್ ವಿಚಾರ ಎಲ್ಲರಿಗೂ ಗೊತ್ತಿತ್ತು. ನಾವು ಇಷ್ಟು ಬೇಗ ಮದುವೆ ಆಗುತ್ತೇವೆ ಎಂದು ಯಾರು ಊಹಿಸಿರಲಿಲ್ಲ. ನಾನು ಮತ್ತು ಕತ್ತಿನಾ ಒಟ್ಟಿಗೆ ಕಳೆಯುವ ಕ್ಷಣ ಖುಷಿ ನೀಡುತ್ತದೆ ಜತೆಗೆ ಮದುವೆ ದಿನಗಳ ಸಂಭ್ರಮ ನನ್ನ ಜೀವನದ ಅತ್ಯುತ್ತಮ ದಿನಗಳು ಎಂದು ವಿಕ್ಕಿ ಕೌಶಲ್ ಮಾತನಾಡಿದ್ದಾರೆ.

Live Tv

Share This Article