ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ‘ಅನಿಮಲ್’ (Animal) ಸಿನಿಮಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ತೃಪ್ತಿ ದಿಮ್ರಿ (Tripti Dimri) ಈಗ ಇಬ್ಬರು ಸ್ಟಾರ್ ನಟರ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
Advertisement
ರಣ್‌ಬೀರ್ ಕಪೂರ್ (Ranbir Kapoor) ಜೊತೆ ರೊಮ್ಯಾನ್ಸ್ ಮಾಡಿದ್ಮೇಲೆ ತೃಪ್ತಿ ಲಕ್ ಬದಲಾಗಿದೆ. ಬಾಲಿವುಡ್‌ನಲ್ಲಿ ನಟಿಗೆ ರೆಡ್ ಕಾರ್ಪೆಟ್ ಹಾಕಿ ವೆಲ್‌ಕಮ್ ಮಾಡುತ್ತಿದ್ದಾರೆ. ಆಫರ್ ಮೇಲೆ ಆಫರ್ ತೃಪ್ತಿ ಕಡೆ ಅರಸಿ ಬರುತ್ತಿದೆ. ಇದನ್ನೂ ಓದಿ:‘ಓ ಮೈ ಲಿಲ್ಲಿ’ ಎಂದು ಅನುಪಮಾ ಜೊತೆ ಸಿದ್ದು ಡ್ಯುಯೇಟ್
Advertisement
Advertisement
ವಿಕ್ಕಿ ಕೌಶಲ್, ಆಮಿ ವಿರ್ಕ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬ್ಯಾಡ್ ನ್ಯೂಸ್’ (Bad Newz) ಎಂಬ ಸಿನಿಮಾದಲ್ಲಿ ಇಬ್ಬರ ಜೊತೆ ತೃಪ್ತಿ ರೊಮ್ಯಾನ್ಸ್ ಮಾಡಲಿದ್ದಾರೆ. ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ತೃಪ್ತಿ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಬ್ಬರ ನಟರ ಇಷ್ಟೋಂದು ಬೋಲ್ಡ್ ಆಗಿ ಕಾಣಿಕೊಳ್ತಾರಾ ಎಂದು ಪ್ರಶ್ನೆಗಳ ಸರಿಮಳೆಯನ್ನೇ ಹರಿಸಿದ್ದಾರೆ.
Advertisement
‘ಬ್ಯಾಡ್ ನ್ಯೂಸ್’ (Bad Newz) ಚಿತ್ರಕ್ಕೆ ಕರಣ್ ಜೋಹರ್ (Karan Johar) ನಿರ್ಮಾಣ ಮಾಡಿದ್ದಾರೆ. ವಿಕ್ಕಿ ಕೌಶಲ್, ಆಮಿಗೆ ತೃಪ್ತಿ ಹೀರೋಯಿನ್ ಆಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದೆ. ಸಿನಿಮಾ ಇದೇ ಜುಲೈ 19ಕ್ಕೆ ರಿಲೀಸ್ ಆಗಲಿದೆ.
ತೃಪ್ತಿ ಸದ್ಯ ಕಾರ್ತಿಕ್ ಆರ್ಯನ್ ಜೊತೆಗಿನ ಸಿನಿಮಾ ಮತ್ತು ಕೆಲವು ತೆಲುಗು ಪ್ರಾಜೆಕ್ಟ್‌ಗಳನ್ನು ನಟಿ ಒಪ್ಪಿಕೊಂಡಿದ್ದಾರೆ.