‘ಬಿಗ್ ಬಾಸ್’ ಹಿಂದಿ ಸೀಸನ್ 17 (Bigg Boss Hindi 17) ಮುಗಿಯುತ್ತಿದ್ದಂತೆ ಬಿಗ್ ಬಾಸ್ ಒಟಿಟಿಗೆ ವೇದಿಕೆ ಸಜ್ಜಾಗಿದೆ. ಈಗಾಗಲೇ ಜಾಸ್ಮಿನ್ ಕೌರ್ ಸೇರಿದಂತೆ ಅನೇಕ ಸೋಷಿಯಲ್ ಮೀಡಿಯಾ ಸ್ಟಾರ್‌ಗಳ ಹೆಸರು ಚಾಲ್ತಿಯಲ್ಲಿದೆ. ಇದರ ನಡುವೆ ನಟಿ ಅಂಕಿತಾ ಲೋಖಂಡೆ (Ankita Lokhande) ಪತಿ ವಿಕ್ಕಿ ಜೈನ್ ಬಿಗ್ ಬಾಸ್ ಒಟಿಟಿ 3 (Bigg Boss Ott 3) ಎಂಟ್ರಿ ಕೊಡಲಿದ್ದಾರೆ.

ವಿಕ್ಕಿ ಜೈನ್ ಈ ಬಾರಿ ಬಿಗ್ ಬಾಸ್ ಒಟಿಟಿ 3 ಸೀಸನ್‌ಗೂ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಒಂದು ವೇಳೆ ವಿಕ್ಕಿ ಜೈನ್ ಬಂದಿದ್ದೆ ಆಗಿದಲ್ಲಿ ಮನರಂಜನೆ ಗ್ಯಾರಂಟಿ. ಈ ಬಗ್ಗೆ ವಿಕ್ಕಿ ಕಡೆಯಿಂದಾಗಲಿ ಅಥವಾ ವಾಹಿನಿ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
ಡಿಜಿಟಲ್ ವರ್ಷನ್ ಬಿಗ್ ಬಾಸ್ ಒಟಿಟಿಗೆ ಸಕಲ ತಯಾರಿ ನಡೆಯುತ್ತಿದೆ. ಮೇ 15ರಂದು ಒಟಿಟಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಒಟಿಟಿ ನಿರೂಪಣೆಗೆ ಈ ಬಾರಿಯೂ ಸಲ್ಮಾನ್ ಖಾನ್ ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಮೇಲೆ ಮೊಟ್ಟೆ ಎಸೆತ

ಜಾಸ್ಮಿನ್ ಕೌರ್ ಸೇರಿದಂತೆ ಅನೇಕ ರೀಲ್ಸ್ ಸ್ಟಾರ್‌ಗಳ ಹೆಸರು ಸದ್ದು ಮಾಡುತ್ತಿದೆ. ಆದರೆ ಬಿಗ್ ಬಾಸ್ ಒಟಿಟಿ ತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಜಾಸ್ಮಿನ್ ಒಟಿಟಿಗೆ ಶೋ ಬರುತ್ತಾರಾ? ಕಾದುನೋಡಬೇಕಿದೆ.



