Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸೈದ್ಧಾಂತಿಕವಾಗಿ ಖರ್ಗೆಯವರನ್ನು ಎದುರಿಸೋ ಶಕ್ತಿ ಇಲ್ಲದಿದ್ರೆ ಸೋಲನ್ನು ಒಪ್ಪಿಕೊಳ್ಳಿ- ಬಿಜೆಪಿಗೆ ರಮೇಶ್ ಬಾಬು ಸವಾಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸೈದ್ಧಾಂತಿಕವಾಗಿ ಖರ್ಗೆಯವರನ್ನು ಎದುರಿಸೋ ಶಕ್ತಿ ಇಲ್ಲದಿದ್ರೆ ಸೋಲನ್ನು ಒಪ್ಪಿಕೊಳ್ಳಿ- ಬಿಜೆಪಿಗೆ ರಮೇಶ್ ಬಾಬು ಸವಾಲು

Bengaluru City

ಸೈದ್ಧಾಂತಿಕವಾಗಿ ಖರ್ಗೆಯವರನ್ನು ಎದುರಿಸೋ ಶಕ್ತಿ ಇಲ್ಲದಿದ್ರೆ ಸೋಲನ್ನು ಒಪ್ಪಿಕೊಳ್ಳಿ- ಬಿಜೆಪಿಗೆ ರಮೇಶ್ ಬಾಬು ಸವಾಲು

Public TV
Last updated: January 19, 2024 7:41 pm
Public TV
Share
4 Min Read
BJP RAMESH BABU
SHARE

ಬೆಂಗಳೂರು: ಸೈದ್ಧಾಂತಿಕವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಎದುರಿಸುವ ಶಕ್ತಿ ಇಲ್ಲದಿದ್ದರೆ ನಿಮ್ಮ ಸೋಲನ್ನು ಒಪ್ಪಿಕೊಳ್ಳಿ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು (Ramesh Babu) ಅವರು ಬಿಜೆಪಿಗರಿಗೆ ಸವಾಲು ಹಾಕಿದ್ದಾರೆ.

ಇಂದು ಕೆಪಿಸಿಸಿ‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಸಂಪ್ರದಾಯವಿದೆ. ಯಾವುದೇ ರಾಜಕಾರಣಿಯನ್ನು ವೈಯಕ್ತಿಕ ದ್ವೇಷದಿಂದ ಟೀಕಿಸುವುದು, ಕೆಳಮಟ್ಟದ ಟೀಕೆಗಳು ಮತ್ತು ಚಾರಿತ್ರ್ಯ ವಧೆ ಮಾಡುವಂತಹ ಟೀಕೆಗಳನ್ನು ಮಾಡುವುದು ಕಡಿಮೆ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ಕೆಲವು ಬಿಜೆಪಿ ನಾಯಕರುಗಳು ವ್ಯತಿರಿಕ್ತವಾಗಿ ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿದ್ದಾರೆ. ಮನುಷ್ಯತ್ವ ಮರೆತು ಮಾತನಾಡುವರು, ಈ ರೀತಿ ವರ್ತಿಸುವವರನ್ನು ನಮ್ಮ ಆಡು ಭಾಷೆಯಲ್ಲಿ ಅಡ್ನಾಡಿಗಳು ಎಂದು ಕರೆಯುತ್ತೇವೆ. ಇಲ್ಲಾ ಏಳು ತಿಂಗಳಿಗೆ ಹುಟ್ಟಿದವರು ಎಂದು ಕರೆಯುತ್ತೇವೆ ಎಂದರು.

ಖರ್ಗೆಯವರು ಯಾರನ್ನೂ ಕೀಳು ಮಟ್ಟದಲ್ಲಿ ಟೀಕೆ ಮಾಡಿಲ್ಲ: ಬಿಜೆಪಿ ನಾಯಕರ ಟೀಕೆಗಳು ಇದಕ್ಕೆ ಪೂರಕವಾಗಿವೆ. ಒಬ್ಬ ರಾಷ್ಟ್ರ ನಾಯಕರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿ, ಏಕವಚನದಲ್ಲಿ ಮಾತನಾಡುವ ಕೆಳ ಮಟ್ಟದ ನಡತೆಯನ್ನು ಬಿಜೆಪಿ ನಾಯಕರು ತೋರಿದ್ದಾರೆ. ವಾರದ ಹಿಂದೆ ಅನಂತ್‌ ಕುಮಾರ್‌ ಹೆಗಡೆಯವರು ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ್ದರು. ಅದರ ಮುಂದುವರಿದ ಭಾಗವಾಗಿ ಸೂಲಿಬೆಲೆಯವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಮಾತನಾಡಿದ್ದಾರೆ. ಅನಂತ್‌ ಕುಮಾರ್‌ ಹೆಗಡೆ (Anant Kumar Hegade), ಸೂಲಿಬೆಲೆ ಹಾಗೂ ಇನ್ನೂ ಅನೇಕ ಬಿಜೆಪಿ ನಾಯಕರು ಸಿದ್ದರಾಮಯ್ಯನವರನ್ನು, ಮಲ್ಲಿಕಾರ್ಜುನ ಖರ್ಗೆಯವರನ್ನು ಡಿ.ಕೆ. ಶಿವಕುಮಾರ್‌ರವರನ್ನು ಟೀಕೆ ಮಾಡಿದರೆ ದೊಡ್ಡ ನಾಯಕರಾಗುತ್ತೇವೆ ಎಂದುಕೊಂಡಿದ್ದಾರೆ. ಆ ಕಾರಣಕ್ಕೆ ಕೆಳ ಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಮತ್ತು ರಾಷ್ಟ್ರದ ರಾಜಕೀಯದಲ್ಲಿ ಐದು ದಶಕಗಳ ಸುದೀರ್ಘ ರಾಜಕೀಯ ಅನುಭವವಿರುವ ಮಲ್ಲಿಕಾರ್ಜುನ ಖರ್ಗೆಯವರು (mallikarjun Kharge) ಯಾರನ್ನು ಕೀಳು ಮಟ್ಟದಲ್ಲಿ ಟೀಕೆ ಮಾಡಿದವರಲ್ಲ. ಇಂದಿಗೂ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಶಿಸ್ತು ಪರಿಪಾಲನೆ ಮಾಡಿಕೊಂಡು ಬಂದಿದ್ದಾರೆ. ಇಡೀ ದೇಶದಲ್ಲಿ ಬೇರೆ ಸಂಸದೀಯ ಪಟುಗಳಿಗೆ ಖರ್ಗೆಯವರು ಉತ್ತಮ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.

ಖರ್ಗೆಯವರ ಬಗ್ಗೆ ಅವರ ಕಾರ್ಯಗಳ ಬಗ್ಗೆ ಸೈದ್ಧಾಂತಿಕವಾಗಿ ಆರೋಗ್ಯಕರವಾಗಿ ಟೀಕೆ ಮಾಡಿದರೆ ನಾವು ಸ್ವೀಕಾರ ಮಾಡುತ್ತೇವೆ. ಹಿಂದೆ ಎಸ್‌ಎಂ ಕೃಷ್ಣರವರು ಕಾಂಗ್ರೆಸ್‌ನಲ್ಲಿದ್ದಾಗ ಸದಾನಂದ ಗೌಡರ (Sadananda Gowda) ನಗುವಿನ ಬಗ್ಗೆ ಟೀಕೆಯ ಮಾತನಾಡಿ ಮತ್ತೆ ಅವರಲ್ಲಿ ಕ್ಷಮೆಯಾಚಿಸಿದ್ದರು. ದೇವೇಗೌಡರು ಯಡಿಯೂರಪ್ಪನವರ ಬಗ್ಗೆ ಕೀಳು ಭಾಷೆಯಲ್ಲಿ ಮಾತನಾಡಿ ಅವರೂ ವಿಷಾದ ವ್ಯಕ್ತಪಡಿಸಿದ್ದರು. ಅಜ್ಞಾನಿ ಚಕ್ರವರ್ತಿ ಸೂಲಿಬೆಲೆಯಾಗಲಿ, ಅಡ್ನಾಡಿಯಾದಂತಹ ಅನಂತ್‌ ಕುಮಾರ್‌ ಹೆಗಡೆಯಾಗಲಿ ದೊಡ್ಡ ನಾಯಕರಿಗೆ ಕೆಳಮಟ್ಟದ ಭಾಷೆಯಲ್ಲಿ ಮಾತನಾಡಿ ನಾಯಕರಾಗುವ ಆಸೆ ಬಿಡಬೇಕು. ನೀವು ಹೀಗೆ ಟೀಕೆ ಮಾಡಿದರೆ ನಾವು ನಿಮ್ಮನ್ನು ಕೆಳ ಮಟ್ಟದ ಭಾಷೆಯಲ್ಲಿ ಟೀಕೆ ಮಾಡುವ ಅನಿವಾರ್ಯತೆಯೂ ಇಲ್ಲ ಅವಶ್ಯಕತೆಯೂ ಇಲ್ಲ ಎಂದರು.

ಸೂಲಿಬೆಲೆ ವಿರುದ್ಧ ಕಿಡಿ: ನಿಮ್ಮ ಎಲ್ಲಾ ಟೀಕೆಗಳನ್ನು ನಾವು ಸ್ವೀಕರಿಸುತ್ತಾ ಕೂರುವುದಿಲ್ಲ. ನಿಮ್ಮ ತಪ್ಪನ್ನುನಿಮಗೆ ಕಾಂಗ್ರೆಸ್‌ ಪಕ್ಷ ಎತ್ತಿ ತೋರಿಸುತ್ತದೆ. ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಕ್ಕೆ ಅನುಕೂಲವಾಗುವಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆ ಕೆಲಸಗಳ ಬಗ್ಗೆ ವಿಮರ್ಶೆ ಮಾಡಿದ್ದರೆ ಒಪ್ಪಬಹುದಿತ್ತು. ಖರ್ಗೆಯವರು ತಮ್ಮ ಅನುದಾನದಡಿಯಲ್ಲಿ ನಿರ್ಮಾಣ ಮಾಡಿಸಿರುವ ಇಎಸ್‌ಐ ಆಸ್ಪತ್ರೆಯನ್ನು ಯಾರ ಮನೆಯ ದುಡ್ಡಿನಲ್ಲಿ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಖರ್ಗೆಯವರು ಅವರ ಹೆಸರನ್ನು ಇಟ್ಟುಕೊಂಡಿದ್ದಾರೆ. ಡ್ರೋಣ್‌ ಸರ್ವೆ ಮಾಡಿ ನೋಡಿದರೆ ಗೊತ್ತಾಗುತ್ತದೆ ಎಂದಿದ್ದಾರೆ. ಅಜ್ಞಾನಿ ಸೂಲಿಬೆಲೆಯವರೆ, ಖರ್ಗೆಯವರು ಕಟ್ಟಿಸಿರುವ ಆಸ್ಪತ್ರೆಯನ್ನು ಡ್ರೋಣ್‌ ಸರ್ವೆ ಮಾಡಲು ಈ ದೇಶದ ಕಾನೂನಿನಲ್ಲಿ ಅವಕಾಶವಿದೆ. ನೀವು ನಾಗಪುರದಲ್ಲಿ ಕಟ್ಟಿರುವ ನಿಮ್ಮ ಸಂಘ ಪರಿವಾರದ ಕಟ್ಟಡಕ್ಕೆ ಡ್ರೋಣ್‌ ಸರ್ವೆ ಮಾಡುವ ಅವಕಾಶವಿದೆಯಾ ಹೇಳಿ ಎಂದು ಪ್ರಶ್ನಿಸಿದರು.

ಸೂಲಿಬೆಲೆಯಾಗಲಿ, ಅನಂತ್‌ ಕುಮಾರ್‌ ಹೆಗಡೆಯಾಗಲಿ ನಾಥೂರಾಮ್‌ ಗೊಡ್ಸೆ ಮನಸ್ಥಿತಿಯಿಂದ ಹೊರಬಂದಿಲ್ಲ. ಇವೇ ಮನಸ್ಥಿತಿಗಳು ಮಲ್ಲಿಕಾರ್ಜುನ ಖರ್ಗೆಯವರ ಮನೆ ಸುತ್ತಾ ಓಡಾಡಿಕೊಂಡು ಅವರಿಗೆ ತೊಂದರೆ ಕೊಡುವ ಕೆಲಸ ಮಾಡಿದ್ದವು. ತಿರುಪತಿ ವೆಂಕಟರಮಣ ಸ್ವಾಮಿಯ ನಾಮದ ಶೈಲಿಯಲ್ಲಿ ಕಾಣುವ ಇಎಸ್‌ಐ ಆಸ್ಪತ್ರೆಯ ಕಟ್ಟಡವನ್ನು ಖರ್ಗೆ ಎನ್ನುವ ಹೆಸರಿನಂತೆ ಕಾಣುತ್ತದೆ ಎಂದು ಹೇಳುತ್ತಿದ್ದೀರಿ. ನೀವು ಮೊದಲು ಕನ್ನಡ ವರ್ಣಮಾಲೆಯಲ್ಲಿ ಖರ್ಗೆ ಹೇಗೆ ಬರುತ್ತದೆ ಎಂದು ತಿಳಿದುಕೊಳ್ಳಿ. ನೀವು ಕಾರವಾರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ಗೆ ಆಕಾಂಕ್ಷಿಯಾಗಿದ್ದರೆ ಹೋಗಿ ಅಮಿತ್‌ ಶಾರವರಿಗೋ, ನಡ್ಡಾರವರಿಗೋ, ಮೋದಿಯವರಿಗೊ ಅಡ್ಡಬಿದ್ದರೆ ನಿಮಗೆ ಟಿಕೆಟ್‌ ಸಿಗಬಹುದು. ಸುಮ್ಮನೆ ಖರ್ಗೆಯವರನ್ನು ಟೀಕೆ ಮಾಡುವುದು ಬಿಡಿ. ನೀವು ಮೊದಲು ಈ ದೇಶದ ಪಾಠ ಕಲಿತುಕೊಳ್ಳಿ. ನಾಗಪುರದ ನಿಮ್ಮ ಸಂಘ ಪರಿವಾರದಲ್ಲಿ 52 ವರ್ಷಗಳ ಕಾಲ ಭಾರತದ ತ್ರಿವರ್ಣ ಧ್ಜಜವನ್ನು ಹಾರಿಸಿರಲಿಲ್ಲ ಎಂದರು.

ನಿಮ್ಮ ಬಹುತೇಕ ಟೀಕೆಗಳಲ್ಲಿ ನಿಮ್ಮ ಆಷಾಡಭೂತಿತನ, ಬೌದ್ಧಿಕ ದಿವಾಳಿತನ ಮತ್ತು ಹತಾಶವಾದ ಎದ್ದು ಕಾಣುತ್ತದೆ. ನಿಮಗೆ ನಿಮ್ಮದೇ ಧಾಟಿಯಲ್ಲಿ ಉತ್ತರ ಕೊಡುವ ಶಕ್ತಿ ಕಾಂಗ್ರೆಸ್‌ಗಿದೆ. ನೀವು ಇಂತಹ ಸುಳ್ಳು ಅಪಪ್ರಚಾರವನ್ನು ಬಿಟ್ಟು, ವಾಸ್ತವ ಪ್ರಪಂಚಕ್ಕೆ ಬನ್ನಿ. ಖರ್ಗೆಯವರನ್ನು ಟೀಕೆ ಮಾಡುವುದರ ಮೂಲಕ ಕರ್ನಾಟಕದ ಜನರನ್ನು ಅವಮಾನ ಮಾಡಿದ್ದೀರಿ. ಈ ಹಿಂದೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಂತಹ ಬಂಗಾರು ಲಕ್ಷಣ್‌ ರವರು ಕೂಡ ಇಂತಹ ಮನಸ್ಥಿತಿಯಿಂದಲೇ ಜೈಲುವಾಸ ಅನುಭವಿಸಿ ಅನಾರೋಗ್ಯಕ್ಕೆ ಒಳಗಾಗಿ ಪ್ರಾಣತ್ಯಾಗ ಮಾಡಿದ್ರು ಎಂದು ಹೇಳಿದರು.

ಇಎಸ್‌ಐ ಆಸ್ಪತ್ರೆಯ (ESI Hospital) ಕಟ್ಟಡವೇನಾದರೂ ಕನ್ನಡ ವರ್ಣಮಾಲೆಯ ಖರ್ಗೆ ಅನ್ನುವ ಅಕ್ಷರಗಳನ್ನು ಹೋಲುವ ರೂಪದಲ್ಲಿ ನಿರ್ಮಿತವಾಗಿದ್ದರೆ ನಾನು ಬಿಜೆಪಿಯ ದೊಡ್ಡ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರ ಮನೆಯ ಶೌಚಾಲಯ ಶುಚಿಗೊಳಿಸಲು ಸಿದ್ಧನಿದ್ದೇನೆ. ಇಲ್ಲವಾದರೆ ಚಕ್ರವರ್ತಿ ಸೂಲಿಬೆಲೆಯವರೇ ನೀವು ಖರ್ಗೆಯವರ ಮನೆ ಶೌಚಾಲಯವನ್ನು ಶುಚಿಗೊಳಿಸುತ್ತೀರಾ? ನಿಮಗೆ ಸೈದ್ಧಾಂತಿಕವಾಗಿ ಖರ್ಗೆಯವರನ್ನು ಎದುರಿಸುವ ಶಕ್ತಿ ಇಲ್ಲದಿದ್ದರೆ ನಿಮ್ಮ ಸೋಲನ್ನು ಒಪ್ಪಿಕೊಳ್ಳಿ ಎಂದು ರಮೇಶ್ ಬಾಬು ಸವಾಲು ಎಸೆದರು.

TAGGED:bengalurucongressmallikarjun khargeramesh babuyಕಾಂಗ್ರೆಸ್ಬಿಜೆಪಿಬೆಂಗಳೂರುಮಲ್ಲಿಕಾರ್ಜುನ ಖರ್ಗೆರಮೇಶ್‌ ಬಬು
Share This Article
Facebook Whatsapp Whatsapp Telegram

Cinema news

Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema
Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema

You Might Also Like

Amir Nasirzadeh
Latest

ಇಸ್ರೇಲ್‌ ದಾಳಿಗೆ ಇರಾನ್ ರಕ್ಷಣಾ ಸಚಿವ ಅಮೀರ್ ಬಲಿ?

Public TV
By Public TV
2 hours ago
P.V.Sindhu stranded at Dubai airport
Latest

ದುಬೈ ಏರ್‌ಪೋರ್ಟ್‌ನಲ್ಲಿ ಸಿಲುಕಿದ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು

Public TV
By Public TV
2 hours ago
Whitefield Water Sump Death
Bengaluru City

ನೀರಿನ ಸಂಪ್ ಸ್ವಚ್ಛ ಮಾಡಲು ಇಳಿದ ಮೂವರು ದುರ್ಮರಣ

Public TV
By Public TV
2 hours ago
pakistan
Cricket

ಟಿ20 ವಿಶ್ವಕಪ್‌ನಿಂದ ಪಾಕ್‌ ಔಟ್‌ – ನ್ಯೂಜಿಲೆಂಡ್‌ ಸೆಮಿಗೆ

Public TV
By Public TV
2 hours ago
Srisailam Ugadi Mahotsav
Latest

ಮಾ.16ರಿಂದ 20ರವರೆಗೆ ಶ್ರೀಶೈಲ ಯುಗಾದಿ ಉತ್ಸವ – 10 ದಿನ 4 ಹಂತಗಳಲ್ಲಿ ಸ್ಪರ್ಶ ದರ್ಶನಕ್ಕೆ ಅವಕಾಶ

Public TV
By Public TV
3 hours ago
vinay kulkarni
Bengaluru City

ಜೈಲಿನಿಂದ ರಿಲೀಸ್ ಆದ ಶಾಸಕ ವಿನಯ್ ಕುಲಕರ್ಣಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?