ಧಾರವಾಡ: ಇಲ್ಲಿನ ಹೈಕೋರ್ಟ್ ಪೀಠಕ್ಕೆ ಪ್ರಕರಣವೊಂದರ ವಾದ ಮಾಡಲು ಬಂದಿದ್ದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice-President Jagdeep Dhankhar) ಧಾರವಾಡದೊಂದಿಗಿನ (Dharwad) ಹಳೆಯ ನೆನಪೊಂದನ್ನು ಅವರು ಮೆಲಕು ಹಾಕಿದ್ದಾರೆ.
ಇಲ್ಲಿನ ಐಐಟಿ (IIT) ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ನನಗೂ ಧಾರವಾಡ ಹೈಕೋರ್ಟ್ ಪೀಠಕ್ಕೂ (Dharwad bench of the Karnataka High Court) ಸಂಬಂಧವಿದೆ. ನಾನು ಇಲ್ಲಿ ಪ್ರಕರಣವೊಂದನ್ನು ವಾದ ಮಾಡಲು ಬಂದಿದ್ದೆ. ಕರ್ನಾಟಕದ ಜೊತೆ ನನಗೆ ಹಳೆಯ ಸಂಬಂಧವಿದೆ. ನಾನು ರಾಜ್ಯಸಭೆಯ ಸಭಾಪತಿ ಬಲಗಡೆ ನೋಡಿದರೆ ಪ್ರಹ್ಲಾದ್ ಜೋಶಿ ಕಾಣುತ್ತಾರೆ. ಎಡಗಡೆ ನೋಡಿದರೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಾಣುತ್ತಾರೆ. ಮಲ್ಲಿಕಾರ್ಜುನ ಖರ್ಗೆಯವರು ಬಹಳ ಅನುಭವಿ ರಾಜಕಾರಣಿ. ಜೋಶಿಯವರು ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುವ ವ್ಯಕ್ತಿ. ಅವರಿಗೆ ಈ ಭಾಗದ ಬಗ್ಗೆ ಬಹಳಷ್ಟು ಕಾಳಜಿ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಐದನೇ ಬಾರಿಗೆ ಬೆಂಗಳೂರಿನಲ್ಲಿ ಬಾಂಬ್ ಸ್ಟೋಟ: ಹಿಂದೆ ಎಲ್ಲೆಲ್ಲಿ ಸಂಭವಿಸಿತ್ತು?
Advertisement
Advertisement
ಇಂದಿನ ವಿದ್ಯಾರ್ಥಿಗಳಿಂದ ಈ ದೇಶದ ಬದಲಾವಣೆ ಆಗಬೇಕಿದೆ. ದೇಶದ ವಿವಿಧ ಐಐಟಿಗಳಲ್ಲಿ ಯುವಕರು ಕಲಿಯುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲೇ ಮೊದಲ ಐಐಟಿ ಧಾರವಾಡದ್ದು. ಇಡೀ ವಿಶ್ವದಲ್ಲೇ ಧಾರವಾಡ ಐಐಟಿ ಉತ್ತುಂಗಕ್ಕೆ ಏರಬೇಕು. ಇಂದಿನ ಯುವಕರೇ ನಾಳಿನ ಈ ದೇಶದ ಭದ್ರ ಬುನಾದಿ ಎಂದಿದ್ದಾರೆ.
Advertisement
Advertisement
ಲೋಕಸಭೆಯಲ್ಲಿ 33%ರಷ್ಟು ಮೀಸಲಾತಿ ಮಹಿಳೆಯರಿಗೆ ಸಿಕ್ಕಿದೆ. 2029ಕ್ಕೆ 33%ರಷ್ಟು ಮಹಿಳಾ ಸಂಸದರು ಸಂಸತ್‍ನಲ್ಲಿ ಇರುತ್ತಾರೆ. ಚಂದ್ರಯಾನ ಹಾಗೂ ಆದಿತ್ಯ ಎಲ್-1ರಂತಹ ಅನೇಕ ಸಾಧನೆಗಳನ್ನು ನಾವು ಮಾಡಿದ್ದೇವೆ. ಸಾಧನೆ ಮೂಲಕ ದೇಶದ ವಿರೋಧಿಗಳಿಗೆ ನಾವು ತಕ್ಕ ಉತ್ತರ ಕೊಡಬೇಕಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರೆವೆ ಇಡ್ಲಿ ತಿಂದು ಬಾಂಬ್ ಇಟ್ಟು ಹೋದ ಆರೋಪಿ – ಬಾಂಬ್ ಸ್ಫೋಟ ಸ್ಥಳಕ್ಕೆ ಡಿಕೆಶಿ ಭೇಟಿ