ಲಕ್ನೋ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡಿದ್ದ ಬಿಎಸ್‌ಪಿ ಈಗ ಉಪರಾಷ್ಟ್ರಪತಿ ಚುನಾವಣೆಯಲ್ಲೂ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್‌ಗೆ ಬೆಂಬಲ ನೀಡಲು ನಿರ್ಧರಿಸಿದೆ. ಈ ಬಗ್ಗೆ ಪಕ್ಷದ ವರಿಷ್ಠೆ, ಮಾಜಿ ಮುಖ್ಯಮಂತ್ರಿ ಮಾಯಾವತಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
Advertisement
ಇಂದು ಟ್ವಿಟ್ ಮಾಡಿರವ ಅವರು, ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡದ ಕಾರಣ ಚುನಾವಣೆ ನಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ಅದೇ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6 ರಂದು ಚುನಾವಣೆಯೂ ನಡೆಯಲಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಭೂತಿ ಹಚ್ಚಿ ಮುರುಘಾಶ್ರೀಗಳಿಂದ ಲಿಂಗಧಾರಣೆ
Advertisement
Advertisement
ದೊಡ್ಡ ಸಾರ್ವಜನಿಕ ಹಿತಾಸಕ್ತಿ ಮತ್ತು ಪಕ್ಷದ ಸ್ವಂತ ಚಳುವಳಿಯ ದೃಷ್ಟಿಯಿಂದ, ಉಪರಾಷ್ಟ್ರಪತಿ ಹುದ್ದೆಯ ಚುನಾವಣೆಯಲ್ಲಿ ಜಗದೀಪ್ ಧನಕರ್ ಅವರಿಗೆ ಬೆಂಬಲ ನೀಡಲು ಬಿಎಸ್‌ಪಿ ನಿರ್ಧರಿಸಿದೆ ಮತ್ತು ನಾನು ಇಂದು ಔಪಚಾರಿಕವಾಗಿ ಘೋಷಿಸುತ್ತಿದ್ದೇನೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಈ ಒಂದು ಸಣ್ಣ ತಪ್ಪಿನಿಂದ ಚಿನ್ನದ ಪದಕ ಕೈತಪ್ಪಿತು – ಪಿ.ವಿ.ಸಿಂಧು ವಿಷಾದ
Advertisement
ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಜಗದೀಪ್ ಧನಕರ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದರೆ, ವಿರೋಧ ಪಕ್ಷಗಳು ಮಾರ್ಗರೇಟ್ ಆಳ್ವ ಅವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಿಸಿವೆ. ಆಗಸ್ಟ್ 6ರಂದು ಈ ಚುನಾವಣೆ ನಡೆಯಲಿದೆ. ಬಿಎಸ್‌ಪಿ ಲೋಕಸಭೆಯಲ್ಲಿ 10 ಮತ್ತು ರಾಜ್ಯಸಭೆಯಲ್ಲಿ ಓರ್ವ ಸದಸ್ಯರನ್ನು ಹೊಂದಿದೆ.