ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಭೂಮಿಯಿಂದ ಭಾರೀ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಇಂದು ಬೆಳಿಗ್ಗೆ 9:53ರ ಸುಮಾರಿಗೆ ಭೂಮಿಯಿಂದ ಭಾರೀ ವಿಚಿತ್ರ ರೀತಿಯಲ್ಲಿ ಸದ್ದು ಕೇಳಿಬಂದಿದೆ. ಇದು ಇಂದು ಮಾತ್ರ ಅಲ್ಲ ಗ್ರಾಮದಲ್ಲಿ ಈ ಹಿಂದೆ ಅನೇಕ ಬಾರಿ ಮೇಲಿಂದ ಮೇಲೆ ಭೂಮಿಯಿಂದ ಈ ರೀತಿಯ ಸದ್ದು ಕೇಳಿಬಂದಿದ್ದು, ಗ್ರಾಮಸ್ಥರಲ್ಲಿ ಭೂಕಂಪನದ ಅನುಭವ ಆದಂತಾಗಿದೆ. ಶಬ್ಧ ಬರಲು ಮೂಲ ಕಾರಣ ಏನು ಎನ್ನುವುದರ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿದೆ. ಇದನ್ನೂ ಓದಿ: ಕಲಬುರಗಿ ಕೋಟೆ ವೀಕ್ಷಿಸಿದ ನಿರಾಣಿ
ಕಳೆದ ಐದು ವರ್ಷಗಳಿಂದ ಈ ಗ್ರಾಮದಲ್ಲಿ ಭೂಮಿಯಿಂದ ಕಂಪಿಸುವ ಶಬ್ದ ಅನೇಕ ಬಾರಿ ಕೇಳಿ ಬಂದ ಪರಿಣಾಮ, ಇಲ್ಲಿ ರಿಕ್ಟರ್ ಮಾಪನ ಸಹ ಕೆಲ ವರ್ಷಗಳ ಹಿಂದೆ ಅಳವಡಿಸಿದ್ದರು. ಆದರೆ ರಿಕ್ಟರ್ ಮಾಪನದಲ್ಲಿ ಇಲ್ಲಿಯವರೆಗೆ ಭೂಕಂಪದ ಬಗ್ಗೆ ಯಾವುದೇ ದಾಖಲಾಗಿಲ್ಲ. ಹೀಗಾಗಿ ಇದು ವಿಜ್ಞಾನಿಗಳಿಗೆ ದೊಡ್ಡ ತಲೆ ನೋವಾಗಿದೆ. ಇದನ್ನೂ ಓದಿ: ವಧು, ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಹಾಸ್ಯ ನಟ