ಲಕ್ನೋ: ದಾಂಪತ್ಯದಲ್ಲಿ ಲೈಂಗಿಕ ಜೀವನ ಚೆನ್ನಾಗಿರಬೇಕು ಎಂದು ಪ್ರತಿಯೊಬ್ಬ ದಂಪತಿ ಬಯಸುತ್ತಾರೆ. ಸೆಕ್ಸ್ ಲೈಫ್ ಚೆನ್ನಾಗಿರಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಅದಕ್ಕಾಗಿ ಕಾಮೋತ್ತೇಜಕ ವಯಾಗ್ರಾ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‍ನಲ್ಲಿ ನವ ವಿವಾಹಿತ ವ್ಯಕ್ತಿಯೊಬ್ಬ ವಯಾಗ್ರ ಮಾತ್ರೆಯನ್ನು ಅತಿಯಾಗಿ ಸೇವಿಸಿ ಎಡವಟ್ಟು ಮಾಡಿಕೊಂಡಿದ್ದಾನೆ.
ಹೌದು, ನವವಿಹಿತ ವ್ಯಕ್ತಿಯೋರ್ವ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಬಳಸುವ ವಯಾಗ್ರ ಮಾತ್ರೆಯನ್ನು ಹೆಚ್ಚಾಗಿ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲದೇ ವೈದ್ಯರು ಚಿಕಿತ್ಸೆ ನೀಡಿದ್ದರೂ, ಆ ವ್ಯಕ್ತಿ ಈಗ ಜೀವನಪೂರ್ತಿ ಕಷ್ಟಪಡುವಂತಾಗಿದೆ. ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಊಟ ಮಾಡಿದ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಕೆಲ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ವ್ಯಕ್ತಿ ತನ್ನ ಸ್ನೇಹಿತರ ಸಲಹೆ ಮೇರೆಗೆ ವಯಾಗ್ರ ಮಾತ್ರೆ ಸೇವಿಸಲು ಆರಂಭಿಸಿದ್ದ. ಆದರೆ ಸ್ನೇಹಿತರು ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ಮಾತ್ರೆಯನ್ನು ಸೇವಿಸಲು ಪ್ರಾರಂಭಿಸಿದ. ಇದರ ಪರಿಣಾಮ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ವ್ಯಕ್ತಿ ಸ್ನೇಹಿತರು ದಿನಕ್ಕೆ 200 ಮಿಲಿ ಗ್ರಾಂ ಕಡಿಮೆ ಪ್ರಮಾಣದ ಮಾತ್ರೆಯನ್ನು ಸೇವಿಸಲು ಸೂಚಿಸಿದರೆ, ವ್ಯಕ್ತಿ ನಿಗದಿತ ಪ್ರಮಾಣಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು ಮಾತ್ರೆಯನ್ನು ಸೇವಿಸಿದ್ದಾನೆ. ಇದರಿಂದ 20 ದಿನಗಳಾದರೂ ನಿಮಿರುವಿಕೆ ಕಡಿಮೆಯಾಗದ ಹಿನ್ನೆಲೆ ಪತಿ ಮೇಲೆ ನಿರಾಶೆಗೊಂಡ ಪತ್ನಿ ಗಂಡನ ಮನೆ ಬಿಟ್ಟು ತವರಿಗೆ ಹೋಗಿದ್ದಳು. ನಂತರ ಪತಿ ಕುಟುಂಬಸ್ಥರು ಆಕೆಯನ್ನು ಸಮಾಧಾನ ಪಡಿಸಿ ಮನೆಗೆ ಮರಳುವಂತೆ ಕೇಳಿಕೊಂಡಾಗ ಮನೆಗೆ ಹಿಂತಿರುಗಿದ್ದಾಳೆ.
ಇದೀಗ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನಿಗೆ ಆಸ್ಪತ್ರೆಯ ವೈದ್ಯರು ಶಿಶ್ನ ಕೃತಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಆದರೂ ಈ ಸಮಸ್ಯೆ ವ್ಯಕ್ತಿಗೆ ಜೀವನಪರ್ಯಾಂತ ಇರುತ್ತದೆ. ಇದನ್ನೂ ಓದಿ: ಕಾನ್ಪುರ ಹಿಂಸಾಚಾರ – 40 ದಂಗೆಕೋರರ ಫೋಟೋ ರಿಲೀಸ್, ಇಬ್ಬರು ಅರೆಸ್ಟ್
ಈ ಕುರಿತಂತೆ ಪ್ರತಿಕ್ರಿಯಿಸಿದ ವೈದ್ಯರು, ವ್ಯಕ್ತಿಗೆ ಮಕ್ಕಳಾಗಬಹುದಾದರೂ, ಆತನ ಖಾಸಗಿ ಅಂಗದಲ್ಲಿರುವ ನೋವು ಎಂದಿಗೂ ಕಡಿಮೆಯಾಗುವುದಿಲ್ಲ. ಉಬ್ಬುವಿಕೆಯನ್ನು ಮರೆಮಾಡಲು ಅವನು ಶಾಶ್ವತವಾಗಿ ಬಿಗಿಯಾದ ಬಟ್ಟೆಯನ್ನು ಧರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.