ಮುಂಬೈ: ಈ ಬಾರಿ ಸದ್ದು ಮಾಡುತ್ತಿರುವ ಮಹಿಳಾ ಐಪಿಎಲ್‍ನ (Women’s IPL) 2023 ರಿಂದ 2027ರ ವರೆಗಿನ ಪ್ರಸಾರ ಹಕ್ಕನ್ನು (Media Rights) ಬರೋಬ್ಬರಿ 951 ಕೋಟಿ ರೂ. ನೀಡಿ ವಯಾಕಾಮ್18 (Viacom18) ಖರೀದಿಸಿದೆ.
Advertisement
ಮಹಿಳಾ ಐಪಿಎಲ್ ನೇರ ಪ್ರಸಾರದ ಹಕ್ಕಿನ ಮಾರಾಟಕ್ಕೆ ಹರಾಜು ಪ್ರಕ್ರಿಯೆ ಕರೆಯಲಾಗಿತ್ತು. ಈ ಹರಾಜಿನಲ್ಲಿ ವಯಾಕಾಮ್18 ಬರೋಬ್ಬರಿ 951 ಕೋಟಿ ರೂ. ನೀಡಿ ಮುಂದಿನ 5 ವರ್ಷಗಳ ಪ್ರಸಾರ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಐಪಿಎಲ್‍ನ ಪ್ರತಿ ಪಂದ್ಯ 7.09 ಕೋಟಿ ರೂ.ಗೆ ಮಾರಾಟವಾಗಿದೆ. ಇದನ್ನೂ ಓದಿ: ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ
Advertisement
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಹಿಳಾ ಐಪಿಎಲ್‍ನ ಪ್ರಸಾರ ಹಕ್ಕನ್ನು ವಯಾಕಾಮ್18 ಪಡೆದುಕೊಂಡಿದೆ. 951 ಕೋಟಿ ರೂ. ನೀಡಿ ಪ್ರಸಾರ ಹಕ್ಕನ್ನು ವಯಾಕಾಮ್18 ಪಡೆದುಕೊಂಡಿದ್ದು, ಪ್ರತಿ ಪಂದ್ಯ 7.09 ಕೋಟಿ ರೂ.ಗೆ ಮಾರಾಟವಾಗಿದೆ. ಇದು ಮಹಿಳಾ ಕ್ರಿಕೆಟ್‍ಗೆ ಸಿಕ್ಕ ಆರಂಭಿಕ ಗೆಲುವು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹಾಕಿ ವಿಶ್ವಕಪ್ – ಭಾರತ, ಇಂಗ್ಲೆಂಡ್ ಪಂದ್ಯ ಡ್ರಾನಲ್ಲಿ ಅಂತ್ಯ
Advertisement
Congratulations @viacom18 for winning the Women’s @IPL media rights. Thank you for your faith in @BCCI and @BCCIWomen. Viacom has committed INR 951 crores which means per match value of INR 7.09 crores for next 5 years (2023-27). This is massive for Women’s Cricket ????????????
— Jay Shah (@JayShah) January 16, 2023
ಈಗಾಗಲೇ ಮಹಿಳಾ ಐಪಿಎಲ್‍ನ 5 ಫ್ರಾಂಚೈಸ್ ಬಗ್ಗೆ ಜ.25 ರಂದು ಬಿಸಿಸಿಐ ಮಾಹಿತಿ ಹಂಚಿಕೊಳ್ಳಲಿದೆ. ಮಾರ್ಚ್‍ನಲ್ಲಿ ಮಹಿಳಾ ಐಪಿಎಲ್ ಆರಂಭಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ಆಟಗಾರ್ತಿಯರ ಹರಾಜು ಪ್ರಕ್ರಿಯೆಗೆ ಕೂಡ ಸಿದ್ಧತೆ ನಡೆಯುತ್ತಿದೆ.
ಈ ಹಿಂದೆ 2023 ರಿಂದ 2027ರ ವರೆಗಿನ ಪುರುಷರ ಐಪಿಎಲ್‍ನ ಪ್ರಸಾರ ಹಕ್ಕು ಒಟ್ಟು 48,390 ಕೋಟಿ ರೂ.ಗೆ ಮಾರಾಟವಾಗಿತ್ತು. ಟಿವಿ ಪ್ರಸಾರ ಹಕ್ಕನ್ನು (ಪ್ಯಾಕೇಜ್ ಎ) 23,575 ಕೋಟಿ ರೂ. ನೀಡಿ ವಾಲ್ಟ್ ಡಿಸ್ನಿ (ಡಿಸ್ನಿಸ್ಟಾರ್) ಸಂಸ್ಥೆ ತನ್ನದಾಗಿಸಿಕೊಂಡಿತ್ತು. ರಿಲಾಯನ್ಸ್ ಇಂಡಸ್ಟ್ರೀಸ್ ಮಾಲೀಕತ್ವದ ವಯಾಕಾಮ್18 ಸಂಸ್ಥೆಯು ಡಿಜಿಟಲ್ ಹಕ್ಕನ್ನು (ಪ್ಯಾಕೇಜ್-ಬಿ) 20,500 ಕೋಟಿ ರೂ. ನೀಡಿ ಪಡೆದುಕೊಂಡಿತ್ತು. ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಪಂದ್ಯ 107.5 ಕೋಟಿ ಮೊತ್ತಕ್ಕೆ ಮಾರಾಟವಾಗಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k