ವಾಷಿಂಗ್ಟನ್: ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಅಯೋಧ್ಯೆ (Ayodhya Ram Mandir) ರಾಮಮಯವಾಗಿ ಸಿಂಗಾರಗೊಳ್ಳುತ್ತಿದೆ. ಎಲ್ಲೆಲ್ಲೂ ರಾಮನಾಮ, ರಾಮಭಕ್ತಿ, ರಾಮಜಪ (Ram Paths) ಕೇಳಿಬರುತ್ತಿದೆ. ನೂರಾರು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿರುವುದಕ್ಕೆ ರಾಮಭಕ್ತರು ಸಂತಸಗೊಂಡಿದ್ದಾರೆ.
#WATCH | Vishwa Hindu Parishad (VHP) of America organised an Epic Tesla Musical Light show in Maryland ahead of the Ram Mandir ‘Pran Pratishtha’ in Ayodhya on January 22. pic.twitter.com/8vG8WhHMIO
— ANI (@ANI) January 14, 2024
Advertisement
ವಿದೇಶಗಳಲ್ಲೂ ಶ್ರೀರಾಮನ ಮಹಿಮೆ ಕಂಡುಬರುತ್ತಿವೆ. ಪ್ರಾಣಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾದುಕುಳಿತಿವೆ. ಈ ನಡುವೆ ವಿಶ್ವದ ಪ್ರತಿಷ್ಠಿತ ಕಾರು ಕಂಪನಿಯಾದ ಟೆಸ್ಲಾ (Tesla Car), ಆದಿಪುರುಷ್ ಚಿತ್ರದ ʻಜೈ ಶ್ರೀರಾಮ್, ಜೈ ಶ್ರೀರಾಮ್ ರಾಜಾರಾಮ್ʼ ಹಾಡಿಗೆ ವಿಶೇಷ ಗೌರವ ಸೂಚಿಸುವುದಕ್ಕಾಗಿ ತನ್ನ ಕಾರುಗಳನ್ನು ಬಳಸಿಕೊಂಡು ಲೈಟ್ ಮೂಲಕ ಡಾನ್ಸ್ (Dance) ಮಾಡಿಸಿದೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣವನ್ನು 74% ಮುಸ್ಲಿಮರು ಸಂಭ್ರಮಿಸ್ತಾರೆ: ಮುಸ್ಲಿಂ ರಾಷ್ಟ್ರೀಯ ಮಂಚ್
Advertisement
Advertisement
ವಿಶ್ವಹಿಂದೂ ಪರಿಷತ್ ಅಮೆರಿಕದ ಘಟಕ ಆಯೋಜಿಸಿದ್ದ ಮ್ಯೂಸಿಕಲ್ ಲೈಟ್‌ಶೋ ಕಾರ್ಯಕ್ರಮದಲ್ಲಿ ಟೆಸ್ಲಾ ಕಂಪನಿಯ ಕಾರುಗಳ ಲೈಟ್ ಗಳು ಡಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!
Advertisement
ಈ ಹಿಂದೆಯೂ ನೂರಾರು ಕಾರುಗಳನ್ನು ಸಾಲು-ಸಾಲಾಗಿ ನಿಲ್ಲಿಸಿ, ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಇದೇ ರೀತಿ ಡಾನ್ಸ್ ಮಾಡಿಸಲಾಗಿತ್ತು. ಇದೀಗ, ದೇಶದೆಲ್ಲೆಡೆ ಶ್ರೀರಾಮನ ಸದ್ದು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀರಾಮನಿಗೆ ನೃತ್ಯದ ಮೂಲಕ ವಿಶೇಷ ಗೌರವವನ್ನು ಟೆಸ್ಲಾ ಕಂಪನಿ ಸಲ್ಲಿಸಿದೆ.
ಈ ವೀಡಿಯೋವನ್ನು ಟೆಸ್ಲಾ ಕಂಪನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದೆ. ಇದಕ್ಕೆ ರಾಮಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ