ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಬಂಧನ – ಜಾಮೀನು

Public TV
1 Min Read
Sharan Pumpwell

-ಕದ್ರಿ ಪೊಲೀಸ್‌ ಠಾಣೆ ಮುಂದೆ ಹಿಂದೂ ಕಾರ್ಯಕರ್ತರ ಜಮಾವಣೆ

ಮಂಗಳೂರು: ಸುಹಾಸ್ ಶೆಟ್ಟಿ (Suhas Shetty) ಹತ್ಯೆ ದಿನ ಬಂದ್‌ಗೆ ಕರೆ ನೀಡಿದ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ (Sharan Pumpwell) ಅವರನ್ನು ಮಂಗಳೂರಿನ ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಬಂದ್‌ಗೆ ಕರೆ ನೀಡಿದ ಹಿನ್ನೆಲೆ ಕದ್ರಿ ಠಾಣೆಯಲ್ಲಿ (Kadri Police Station) ಎಫ್‌ಐಆರ್ ದಾಖಲಾಗಿತ್ತು. ಶರಣ್ ಪಂಪ್‌ವೆಲ್ ಬಂಧನ ಬೆನ್ನಲ್ಲೇ ಕದ್ರಿ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ. ಸದ್ಯ ಶರಣ್ ಪಂಪ್‌ವೆಲ್ ಅವರನ್ನು ಪೊಲೀಸರು ಕದ್ರಿ ಠಾಣೆಯಿಂದ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಮಾನ್ಸೂನ್ ಅಬ್ಬರ – ಕೇರಳದ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಈ ಕುರಿತು ವಿಹೆಚ್‌ಪಿ ಮುಖಂಡ ಪ್ರದೀಪ್ ಸರಿಪಲ್ಲ ಮಾಧ್ಯಮಗಳೊಂದಿಗೆ ಮಾತನಾಡಿ, ಮುಸ್ಲಿಮರನ್ನು ಓಲೈಕೆ ಮಾಡೋಕೆ ಸರ್ಕಾರ ಪೊಲೀಸರಿಗೆ ಒತ್ತಡ ತಂದಿದೆ. ಸುಹಾಸ್ ಹತ್ಯೆಯ ದಿನ ಬಂದ್‌ಗೆ ಕರೆ ನೀಡಿರೋದಕ್ಕೆ ಕೇಸ್ ಆಗಿತ್ತು. ಕೇಸ್ ಆಗಿ 20 ದಿನಗಳೇ ಕಳೆದುಹೋಗಿದೆ. ಈಗ ಬಂಧನ ಮಾಡಿರೋದು ಯಾಕೆ? ಇವತ್ತಿನ ಘಟನೆ ಹಿನ್ನೆಲೆ ಮುಸ್ಲಿಮರನ್ನು ಓಲೈಕೆ ಮಾಡೋಕೆ ಬಂಧನ ಮಾಡಿದ್ದಾರೆ. ಇದು ಜಾಮೀನಾಗುವ ಕೇಸ್. ಜೈಲಿಗೆ ಹಾಕಲ್ಲ ಎಂದು ಕಮಿಷನರ್ ಹೇಳಿದ್ದಾರೆ. ಶರಣ್ ಪಂಪ್ ವೆಲ್‌ನನ್ನು ಜೈಲಿಗೆ ಹಾಕಿದರೆ ಮುಂದೆ ಆಗುವ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಸರ್ಕಾರ ಮತ್ತು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: 1200 ರೂ. ಬೆಲೆಯ ಟಿಕೆಟ್‌ 6000ಕ್ಕೆ ಸೇಲ್‌ – ಐಪಿಎಲ್‌ ಟಿಕೆಟ್‌ ಮಾರುತ್ತಿದ್ದ ಟೆಕ್ಕಿ ಬಂಧನ

ಶರಣ್ ಪಂಪ್‌ವೆಲ್ ಬಂಧಿಸಿದ ಪೊಲೀಸರು ಮಂಗಳೂರಿನ ಬೋಂದೆಲ್‌ನ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಶರಣ್ ಪಂಪ್‌ವೆಲ್‌ಗೆ ಜಾಮೀನು ನೀಡಿದ್ದಾರೆ.

Share This Article