– ಭಗವಾಧ್ವಜ ಅಳವಡಿಸಲು 20 ಲಕ್ಷದ ಬಾಂಡ್ ಬರೆಸಿಕೊಂಡರೆಂದು ದಿನೇಶ್ ಮೆಂಡನ್ ಅಸಮಾಧಾನ
ಉಡುಪಿ: ಇಲ್ಲಿನ ಹಿಂದೂ ಸಮಾಜೋತ್ಸವಕ್ಕೆ ನಗರದಲ್ಲಿ ಕೇಸರಿ ಪತಾಕೆ ಮತ್ತು ಭಗವಾಧ್ವಜ (Bhagwa Flag) ಅಳವಡಿಸಲು ಪೊಲೀಸ್ ಇಲಾಖೆ (Udupi Police Department) 10 ಮತ್ತು 20 ಲಕ್ಷದ ಬಾಂಡ್ ಬರೆಸಿಕೊಂಡಿದ್ದಾರೆ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್ ಅಸಮಾಧಾನ ಹೊರಹಾಕಿದ್ದಾರೆ.
ಉಡುಪಿ (Udupi) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2024ರಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಭಗವಾಧ್ವಜ ಹಾಕುತ್ತೇವೆ. ಆಗ ಎಷ್ಟು ಲಕ್ಷ ಬಾಂಡ್ ಬರೆಸಿಕೊಳ್ಳುತ್ತೀರಿ..? ಎಂದು ಪ್ರಶ್ನಿಸಿದರಲ್ಲದೇ, ನಾಉ ಒಂದು ಕೋಟಿ ರೂಪಾಯಿ ಬಾಂಡ್ ಕೊಡಲು ಸಿದ್ಧರಿದ್ದೇವೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಪ್ರತಿಭಟನಾ ನಿರತ ಕಾರ್ಯಕರ್ತರು ಪೊಲೀಸ್ ವಶಕ್ಕೆ – ಮುನಿರತ್ನ ಏಕಾಂಗಿಯಾಗಿ ಪ್ರತಿಭಟನೆ
Advertisement
Advertisement
2024ಕ್ಕೆ ಶ್ರೀರಾಮಂದಿರ (Sri Rama Mandira) ಉದ್ಘಾಟನೆಗೊಳ್ಳಲಿದೆ. ಆಗ ನಗರ ಮಾತ್ರವಲ್ಲ, ಪ್ರತಿಯೊಬ್ಬರ ಮನೆಯಲ್ಲೂ ಭಗವಾಧ್ವಜ ಹಾರಾಡುತ್ತದೆ. ಆಗ ಪೊಲೀಸ್ ಇಲಾಖೆ ಹಿಂದೂಗಳ ಮನೆ-ಮನೆಗೆ ಭೇಟಿ ನೀಡಿ 10 ಲಕ್ಷ ಅಲ್ಲ, 10 ಕೋಟಿ ರೂ. ಬಾಂಡ್ ಬರೆಸಿಕೊಂಡರೂ ನಾವು ಸಹಿ ಹಾಕಲು ಸಿದ್ಧರಿದ್ದೇವೆ. ಮುಂದೊಂದು ದಿನ ಅಖಂಡ ಭಾರತ ಕೇಸರಿಮಯ ಆಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲಂಕಾ ವಿರುದ್ಧ ಮೋಸದಾಟವಾಡಿತಾ ಪಾಕ್? – ಮತ್ತೆ ಮತ್ತೆ ಟೀಕೆಗೆ ಗುರಿಯಾಗ್ತಿರೋದೇಕೆ?
Advertisement
Advertisement
ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಪೊಲೀಸರ ಮೂಲಕ ಕಿರುಕುಳ ನೀಡುತ್ತಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ವಿಹೆಚ್‌ಪಿ ಮುಖಂಡ ಶರಣ್ ಪಂಪ್ ವೆಲ್‌ಗೂ ನಿರ್ಬಂಧ ಹಾಕಿದೆ. ಹಿಂದೂಗಳನ್ನು ಕೆಣಕಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರೋ ಪತ್ನಿಯಿಂದ ಪತಿಗೆ ಕಿರುಕುಳ
Web Stories