ಗಾಂಧಿನಗರ: ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಒಂದಿಲ್ಲೊಂದು ವಿವಾದಗಳು ನಡೆಯುತ್ತಲೇ ಇವೆ. ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ರಾಜಾಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಒಬ್ಬನ ಹತ್ಯೆ ನಡೆಯಿತು.
ನಿನ್ನೆಯೂ ಅದೇ ವಿಚಾರಕ್ಕೆ ಭೋಜ್‌ಪುರ್ ಜಿಲ್ಲೆಯಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದ ಹಿಂದೂ ಯುವಕನ ಮೇಲೆ ಸುಮಾರು 20 ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ. ಈ ಎಲ್ಲ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ವಿಶ್ವಹಿಂದೂ ಪರಿಷತ್ (VHP) ಹಾಗೂ ಭಜರಂಗದಳವು ಸಮಸ್ಯೆಯಲ್ಲಿರುವ ಹಿಂದೂಗಳಿಗೆ ಸಹಾಯ ಮಾಡಲು ಸಹಾಯವಾಣಿ ಪ್ರಾರಂಭಿಸಿದೆ. ಸಮಸ್ಯೆಗಳ ಸುಳಿಯಲ್ಲಿರುವ ಹಿಂದೂಗಳಿಗೆ ಆರ್ಥಿಕ, ಕಾನೂನು ನೆರವು ನೀಡುವ ಉದ್ದೇಶದಿಂದ ಸಹಾಯವಾಣಿ ಪ್ರಾರಂಭಿಸಿವೆ. ಇದನ್ನೂ ಓದಿ: ಎಸಿಬಿ ಕಾರ್ಯವೈಖರಿಗೆ ಹೈಕೋರ್ಟ್ ಜಡ್ಜ್ ಕ್ಲಾಸ್- ಬಿ ರಿಪೋರ್ಟ್ ಅಪೂರ್ಣ ಮಾಹಿತಿಗೆ ತರಾಟೆ
Advertisement
Advertisement
ಈ ಕುರಿತು ಗುಜರಾತ್ ವಿಹೆಚ್‌ಪಿ ಪ್ರಧಾನ ಕಾರ್ಯದರ್ಶಿ ಅಶೋಕ್ ರಾವಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮಾಜ ವಿರೋಧಿಗಳು ಹಾಗೂ ದೇಶದ್ರೋಹಿಗಳು ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಮುಸ್ಲಿಮರು ಹಿಂದೂಗಳನ್ನು ಟಾರ್ಗೆಟ್ ಮಾಡ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಟೈಲರ್ ಶಿರಚ್ಛೇದನ ಹತ್ಯೆಯನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.
Advertisement
Advertisement
ನಾವು ಎಲ್ಲಾ ಹಿಂದೂಗಳೊಂದಿಗೆ ಇದ್ದೇವೆ. 24 ಗಂಟೆಯೂ ನಿಮ್ಮ ಸಹಾಯಕ್ಕೆ ನಾವಿರುತ್ತೇವೆ. ಅದಕ್ಕಾಗಿ ಸಹಾಯವಾಣಿ (ಮೊ.ಸಂ. 9198942004) ಪ್ರಾರಂಭಿಸಿದ್ದೇವೆ. ಸಮಸ್ಯೆಯಲ್ಲಿರುವ ಯಾವುದೇ ಹಿಂದೂಗಳು ಕರೆ ಮಾಡಬಹುದು. ಮೊದಲು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ, ಹೆಚ್ಚಿನ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು. ನಾವು ಎಲ್ಲರಿಗೂ ಕಾನೂನು ಮತ್ತು ಆರ್ಥಿಕ ಸಹಾಯ ಒದಗಿಸುತ್ತೇವೆ. ಆತಂಕಪಡುವ ಅಗತ್ಯವಿಲ್ಲ, ನಾವು ನಮ್ಮ ಹಿಂದೂಗಳಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.